Belagavi News In Kannada | News Belgaum

ಡಿಜಿಟಲ್ ಹಣಕಾಸು ” [ Fair Digital Finance ] ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.

N

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:29-02-2022 ರಂದು ಗುರುವಾರ ಬೆಳಿಗ್ಗೆ 10-30ಕ್ಕೆ ಕನ್ನಡ ಸಾಹಿತ್ಯ ಭವನ, ರಾಣ ಚನ್ನಮ್ಮ ವೃತ್ತ, ಬೆಳಗಾವಿ ಯಲ್ಲಿ ಗ್ರಾಹಕರ ದಿನಾಚರಣೆಯನ್ನು “ನ್ಯಾಯೋಚಿತ ಡಿಜಿಟಲ್ ಹಣಕಾಸು ” [ Fair Digital Finance ] ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಂ.ಜಿ.ಹಿರೇಮಠ, ಭಾ.ಆ.ಸೇ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು. ಬೆಳಗಾವಿ ಇವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿ ಮಾತನಾಡುತ್ತಾ- ಗ್ರಾಹಕರ ಹಕ್ಕುಗಳ ಕುರಿತು ಜಗತ್ತಿನಲ್ಲಿ ಮೊಟ್ಟಮೊದಲು ಅಮೇರಿಕಾದ ರಾಷ್ಟ್ರಾದ್ಯಕ್ಷ ಶ್ರೀ ಜೋನ್ ಎಫ್ ಕೆನಡಿ ಪ್ರಸ್ತಾಪಸಿದ ಬಗ್ಗೆ ತಿಳಿಸಿ, ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮಾರುಕಟ್ಟೆಯಲ್ಲಿನ ದುರುಪಯೋಗದ ಬಗ್ಗೆ ಅರಿವು ಮೂಡಿಸಲು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಾಹಕರು ವಸ್ತುಗಳನ್ನು ಪಡೆದುಕೊಂಡು ಅವುಗಳಲ್ಲಿ ಏನಾದೂರು ಲೋಪದೋಷಗಳನ್ನು ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸುವ ಕುರಿತು ತಿಳಿಸಿದರು ಮತ್ತು ನಮ್ಮ ದೇಶದಲ್ಲಿ ಡಿಜಿಟಲ್ ಯುಗ ಪ್ರಾರಂಭವಾಗಿದ್ದು, ಪ್ರತಿನಿತ್ಯ ಸುಮಾರು 14 ಕೋಟಿಯಷ್ಟು ವ್ಯವಹಾರ ಡಿಜಿಟಲ್ ಹಣಕಾಸು ಮೂಲಕ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿಯಾಗಿ ಡಿಜಿಟಲ್ ಹಣಕಾಸು ವ್ಯವಹಾರ ಆಗಲಿದೆ. ಈ ಬಗ್ಗೆ ಪ್ರಸ್ತುತವಾಗಿ ಚಾಲ್ತಿಯಲ್ಲಿರುವ ವಿವಿದ ಬಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಡಿಜಿಟಲ್ ವ್ಯವಹಾರಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ ರಾಚಪ್ಪ ಕು ತಾಳಿಕೋಟಿ ರವರು ಗ್ರಾಹಕರಿಗೆ ಉತ್ತಮ ಅವಕಾಶ ಆಗಿರುವ ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ತಿಳಿದುಕೊಂಡು ಕಡಿಮೆ ವೆಚ್ಚದಲ್ಲಿ ಪರಿಹಾರ ಕಂಡುಕೊಳ್ಳಬಹುದು, ಸದರಿ ಕಾಯ್ದೆಯಲ್ಲಿ ಸೆಕ್ಷನ್ 72ರ ಪ್ರಕಾರ ಆದೇಶ ಪಾಲಿಸದಿದ್ದಲ್ಲಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಕಾರಣ ಈ ಕಾಯ್ದೆಯ ಲಾಭ ಪಡೆಯಬೆಕೆಂದು ತಿಳಿಸಿತ್ತಾ ಕೊಳ್ಳುವವರಕ್ಕಿಂತ ಮಾರುವವರೇ ಎಚ್ಚರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ ಎಂದರು.
ಶ್ರೀ ಎನ್.ಆರ್.ಲಾತೂರ, ನ್ಯಾಯವಾದಿಗಳು ಹಾಗೂ ಅಧ್ಯಕ್ಷರು ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘ, ಬೆಳಗಾವಿ ಇವರು-ಗ್ರಾಹಕರ ಕಾನೂನು-2019ರ ಕುರಿತ ಉಪನ್ಯಾಸ ನೀಡಿ ಗ್ರಾಹಕರ ಸಂರಕ್ಷಣ ಕಾಯ್ದೆ 1986ರ ಬಗ್ಗೆ ವಿವರಿಸಿ ಪರಿಷ್ಕøತ 2019ನೇ ಸಾಲಿನ ನೂತನ ಗ್ರಾಹಕ ಸಂರಕ್ಷಣೆ ಬಗ್ಗೆ ಅದರಲ್ಲಿರುವ ಬದಲಾವಣೆÀಗಳ ಬಗ್ಗೆ ವಿವರಿಸಿದರು. ಮುಂದುವರೆದು ಹಣಕೊಟ್ಟು ಸೇವೆಗಳನ್ನು ಪಡೆದುಕೊಂಡ ಗ್ರಾಹಕರು ಎನಾದರೂ ಕುಂದುಕೊರತೆಗಳು ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರನ್ನು ಸಲ್ಲಿಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ನ್ಯಾಯವಾದಿಗಳ ಸಹಾಯವಿಲ್ಲದೆ ಕಡಿಮೆ ಅವಧಿಯಲ್ಲಿ ಗ್ರಾಹಕರೇ ನ್ಯಾಯವನ್ನು ಪಡೆಯಬಹುದಾಗಿದೆ. ಹೊಸ ಕಾಯ್ದೆಯಲ್ಲಿ ಜಿಲ್ಲಾ ಗ್ರಾಹÀಕರ ವ್ಯಾಜ್ಯಗಳ ಪರಿಹಾರ ವೇದಿಕೆ ನಷ್ಟ ಪರಿಹಾರ ನಿಡುವದರೊಂದಿಗೆ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅಗತ್ಯ ಬಿದ್ದಲ್ಲಿ ದಂಡ ಶಿಕ್ಷೆಯನ್ನು ನೀಡುವ ಅಧಿಕಾರ ಹೊಂದಿದೆ ಈ ಕುರಿತು ಗ್ರಾಹಕರು ದೈರ್ಯವಾಗಿ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕೆಂದರು.
ಶ್ರೀ ಎಂ.ಎಸ್.ಜೋಶಿ, ಮುಖ್ಯ ವ್ಯವಸ್ಥಾಪಕರು, ಎಲ್.ಪಿ.ಜಿ.(ಸೇಲ್ಸ) ಐ.ಓ.ಸಿ. ಬೆಳಗಾವಿ ಇವರು -ಎಲ್‍ಪಿಜಿ ಸುರಕ್ಷತೆ & ತಿಳುವಳಿಕೆ ಕುರಿತು ಉಪನ್ಯಾಸ ನೀಡಿ, ಎಲ್ ಪಿ ಜಿ ಗ್ಯಾಸ್ ಬಳಕೆ, ಅವುಗಳ ತೂಕದ ಬಗ್ಗೆ, ಆನ್ ಲೈನ್ ಬುಕ್ಕಿಂಗ್ ಬಗ್ಗೆ, ಮತ್ತು ಡಿಜಿಟಲ್ ಪೇಮೆಂಟ ಬಗ್ಗೆ ವಿವರವಾದ ಮಾಹಿತಿ ನೀಡಿದರು ಮತ್ತು ಅನಾಹುತ ಆದಲ್ಲಿ ವಿಮೆ/ಪರಿಹಾರವನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು
ಮುಖ್ಯ ಅಥಿತಿಗಳಾದ ಶ್ರೀ ಸಂಜೀವ ಕುಲಕಣ ್, ಅಧ್ಯಕ್ಷರು, ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಜ್ಯಗಳ ಪರಿಹಾರ ಆಯೋಗ ಬೆಳಗಾವಿ ಇವರು ಮಾತನಾಡಿ, ಗ್ರಾಹಕರು ಸರಕು ಖರೀದಿ, ಸೇವೆಗಳ, ಗುಣಮಟ್ಟದ

ನ್ಯೂನ್ಯತೆಗಳ ಬಗ್ಗೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ, ರಾಜ್ಯ ಮಟ್ಟದ ಗ್ರಾಹಕರ ವ್ಯಾಜ್ಯಗಳ ಆಯೋಗ ಮತ್ತು ರಾಷ್ಟ್ರ ಮಟ್ಟದ ಗ್ರಾಹಕರ ವ್ಯಾಜ್ಯಗಳ ಆಯೋಗಗಳಲ್ಲಿ ದೂರುಗಳ ದಾಖಲಿಸುವ ಬಗ್ಗೆ ವಿವರಿಸಿದರು. ಗ್ರಾಹಕರು ದೂರು ದಾಖಲಿಸಿದ 90 ದಿವಸದೊಳಗಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವದು ವಿವರಿಸಿದರು. ಹಾಗೂ ಸಭೆಗೆ ಹಾಜರಿದ್ದ ಗ್ರಾಹಕರು ಸೊಸೈಟಿ/ಸಂಘ ಸಂಸ್ಥೆಗಳಲ್ಲಿ ಇಟ್ಟಂಥಹ ಹಣಕಾಸಿನ ಕುಂದು ಕೊರತೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮಂಜಸವಾಗಿ ಪರಿಹಾರ ಪಡೆÀಯುವ ಬಗ್ಗೆ ವಿವರಿಸಿದರು.
ಇದಕ್ಕೂ ಮೊದಲು ಶ್ರೀ ಚನ್ನಬಸಪ್ಪ ವಿ ಕೊಡ್ಲಿ, ಜಂಟಿ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಳಗಾವಿ ಇವರು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಎಲ್ಲ ಗಣ್ಯರನ್ನು ಹೂಗುಚ್ಛ ನೀಡುವುದರೊಂದಿಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗ್ರಾಹಕರೆಂದರೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳನ್ನು ಗೃಹೋಪಯೋಗಕ್ಕೆ ಮತ್ತು ವಾಣ ಜ್ಯ ಉದ್ದೇಶಕ್ಕಾಗಿ ಪಡೆದುಕೊಳ್ಳುವವರೇ ಗ್ರಾಹಕರಾಗುತ್ತಾರೆ. ಪಡೆದ ವಸ್ತುಗಳು ದೂಷಪೂರಿತವಾಗಿದ್ದಲ್ಲಿ ಅಥವಾ ಹೆಚ್ಚಿನ ಬೆಲೆ ಪಡೆದುಕೊಂಡಿದ್ದಲ್ಲಿ ಇಂತಹ ಪ್ರಕರಣಗಳ ಬಗ್ಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸುವ ಬಗ್ಗೆ ಪ್ರಸ್ತಾವಿಕವಾಗಿ ತಿಳಿಸಿದರು.
ವೇದಿಕೆಯ ಮೇಲೆ ಶ್ರೀಮತಿ ಸುನಂದಾ ಕಾದ್ರೊಳ್ಳಿಮಠ, ಸದಸ್ಯರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಳಗಾವಿ. ಶ್ರೀಮತಿ ಬಿ.ಯು.ಗೀತಾ, ಮಹಿಳಾ ಸದಸ್ಯರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಳಗಾವಿ. ಹಾಗೂ ಶ್ರೀ ಎಸ್.ಎಸ್.ಉಪ್ಪಾರ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಬೆಳಗಾವಿ ಇವರು ಉಪಸ್ಥಿತರಿದ್ದರು.
ಶ್ರೀ ಅಶೋಕ ಗುರಾಣ , ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಬೆಳಗಾವಿ ಇವರು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ ಬಗ್ಗೆ ವೇದಿಕೆಯ ಮೇಲಿದ್ದ ಎಲ್ಲ ಗಣ್ಯರನ್ನು, ಅಧಿಕಾರಿಗಳನ್ನು, ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರಾಹಕರುಗಳು/ ಸಾರ್ವಜನಿಕರು, ಮಾದ್ಯಮ ಮಿತ್ರರು, ಮತ್ತು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.
ಶ್ರೀ ಜೆ.ಸಿ.ಅಷ್ಟಗಿಮಠ, ಸಹಾಯಕ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ, ಜಂಟಿ ನಿರ್ದೆಶಕರ ಕಚೇರಿ ಬೆಳಗಾವಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.