Belagavi News In Kannada | News Belgaum

ಶೃತಿ ಕೀವಡಿ ಅವರಿಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರಧಾನ.

ಶೃತಿ ಕೀವಡಿ ಅವರಿಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರಧಾನ.

ಅಖಿಲ ಕರ್ನಾಟಕ ಸಾಂಸ್ಕೃತಿಕ
ಪರಿಷತ್ತು(ರಿ) ಬೆಂಗಳೂರು ಇವರ ವತಿಯಿಂದ ಹಾಗೂ ಮನೋಹರ
ನಾಯಕರವರ ನೇತೃತ್ವದಲ್ಲಿ ವಿಶ್ವ ಮಹಿಳಾ
ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು

ಇತ್ತಿಚಿಗೆ ನಡೆದ ರಾಮದುರ್ಗದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ
ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಲಿನಲ್ಲಿ ಅಥಣಿಯ ಶೃತಿ ಜಗದೀಶ ಕೀವಡಿ ಅವರಿಗೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು

ಇದೆ ಸಂಧರ್ಭದಲ್ಲಿ
ಶ್ರೀ ಚಂದ್ರಶೇಖರ್ ಮಹಾ ಸ್ವಾಮಿಜೀಗಳು ಹುಕ್ಕೇರಿ, ಶ್ರೀ ಶಾಂತೇಶ್ವರ ಮಹಾ ಸ್ವಾಮಿಜೀಗಳು
ರಾಮದುರ್ಗ, ಮಹದೇವಪ್ಪ ಯಾದವಾಡ, ಆರ್ ಬಿ ನಾಯಕ, ರಮೇಶ ದೇಶಪಾಂಡೆ,ಆನಂದ ಹಕ್ಕನ್ನವರ,ಹಲವಾರು ಗಣ್ಯರು ಈ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.