Belagavi News In Kannada | News Belgaum

ಉದ್ಯಮಿಗೆ 3.50 ಕೋಟಿ ವಂಚನೆ

ಹುಬ್ಬಳ್ಳಿ: ಪ್ರಾಜೆಕ್ಟ್ ನೀಡುವುದಾಗಿ ಉದ್ಯಮಿಯೊಬ್ಬರನ್ನು ನಂಬಿಸಿ 3.50 ಕೋಟಿ ಹಣ ಪಡೆದು ವಂಚಿಸಿದ್ದ ನಾಲ್ವರ ವಿರುದ್ಧ ಶಂಕರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಿತ್ ಪ್ರಭು, ಅಂಕಿತ ಕಾಮತ್, ಬೆಂಗಳೂರಿನ ದೀಪಕ್ ಸುಂದರರಾಜನ್ ಮತ್ತು ಹೈದರಾಬಾದ್‍ನ ಶ್ರವಣಕುಮಾರ ವಿರುದ್ಧ ದೂರು ನೀಡಲಾಗಿದೆ.

2019ರಲ್ಲಿ ಸ್ಯಾಟಲೈಟ್ ಬಿಲ್ಡಿಂಗ್‍ನಲ್ಲಿ ಬಿಎಲ್‍ಎಚ್ ಹೈಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ವಿನೋದ್ ರಾಥೋಡ್, ಅಂಕಿತಾ ಕಾಮತ್ ಆರಂಭಿಸಿದರು. ಸಿಂಗಾಪುರದಲ್ಲಿ ಸಾಫ್ಟ್‍ವೇರ್ ಹಾಗೂ ಐಟಿ ಕಂಪನಿಯ ಪ್ರಾಜೆಕ್ಟ್ ಇದ್ದು ಅದನ್ನು ಪಡೆಯಲು ಹಣ ಬೇಕಾಗುತ್ತದೆ ಎಂದು ಉದ್ಯಮಿ ವಿನೋದ್ ರಾಥೋಡ್ ಅವರಿಂದ 15 ಲಕ್ಷ ಪಡೆದುಕೊಂಡಿದ್ದರು.

ಅಲ್ಲದೆ ಬೇರೆ ಬೇರೆ ಪ್ರಾಜೆಕ್ಟ್ ಹೆಸರಿನಲ್ಲಿ 3.50 ಕೋಟಿ ರೂ. ಪಡೆದಿದ್ದಾರೆ. ಹಣ ಪಡೆದು ವರ್ಷವಾದರೂ ಪ್ರಾಜೆಕ್ಟ್ ನೀಡದೆ ಇದ್ದುದರಿಂದ ಹಣ ಹಿಂದಿರುಗಿಸುವಂತೆ ವಿನೋದ್ ರಾಥೋಡ್ ಅವರು ಕೇಳಿದಾಗ, ದೀಪಕ್ ಎಂಬಾತ ಕೊಲೆ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ವಿನೋದ್ ರಾಥೋಡ್ ಅವರು ಶಂಕರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡು ನಾಲ್ವರಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ./////