Belagavi News In Kannada | News Belgaum

ಸಚಿವ ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಬೆಳಗಾವಿ ಗುತ್ತಿಗೆದಾರ

ಬೆಂಗಳೂರು: ಮಾಡಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಮತ್ತು ಪ್ರಥಮ ದರ್ಜೆ ಗುತ್ತಿದಾರ ಸಂತೋಷ್, ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಅಭಿವೃದ್ಧಿಗಾಗಿ, 4 ಕೋಟಿ ವೆಚ್ಚದಲ್ಲಿ ಸುಮಾರು 108 ವಿವಿಧ ಕಾಮಗಾರಿಗಳನ್ನು ಈಶ್ವರಪ್ಪ ಮಂಜೂರು ಮಾಡಿದ್ದರು. ಸದ್ಯ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಗುತ್ತಿಗೆದಾರ ಸಂತೋಷ ಅವರಿಗೆ ಇನ್ನೂ ಒಂದು ರೂ. ಸಹ ಬಂದಿಲ್ಲ. ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಈಶ್ವರಪ್ಪ ಆಪ್ತರು ಮತ್ತು ಇಲಾಖೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತು ಹಣ ಬಿಡುಗಡೆ ಮಾಡಲು ಸೂಚನೆ ನೀಡುವಂತೆ ಪ್ರಧಾನಿ ಮೋದಿಗೆ ಬೆಳಗಾವಿ ಗುತ್ತಿಗೆದಾರ ಸಂತೋಷ ಪತ್ರ ಬರೆದಿದ್ದಾರೆ./////