Belagavi News In Kannada | News Belgaum

ನದಿಯಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

ವಿಜಯಪುರ:ಸ್ನಾನಕ್ಕೆಂದು ತುಂಗಭದ್ರಾ ನದಿಗೆ ಇಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಮೈಲಾರ ಗ್ರಾಮದಲ್ಲಿ ನಡೆದಿದೆ.
ಗದಗ ನಗರದ ವಿಜಯ (13) ಹಾಗೂ ವಿಶಾಲ್ ಬಾಗಲಕೋಟೆ (14) ಮೃತ ಬಾಲಕರು. ಸ್ನೇಹಿತರೊಂದಿಗೆ ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಬಾಲಕರು ಇಳಿದಿದ್ದರು. ಆದರೆ ಇಬ್ಬರು ಬಾಲಕರಿಗೂ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಮೃತ ಬಾಲಕರ ಶವ ಮೇಲಕ್ಕೆತ್ತಿದ್ದು, ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////