Belagavi News In Kannada | News Belgaum

ಉಕ್ರೇನ್ ದಲ್ಲಿ ಸಿಲುಕಿಕೊಂಡಿದ್ದ 22 ಸಾವಿರ ಭಾರತೀಯ ರಕ್ಷಿಸಿದ ಧೀಮಂತ ನಾಯಕ ನರೇಂದ್ರ ಮೋದಿಯವರ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ

ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಹೇಳಿದರು.

ಬೆಳಗಾವಿ: ದೇಶದ ಜನತೆಗಾಗಿ 18 ಗಂಟೆಗಳ ಕಾಲ ನಿರಂತರ ಕೆಲಸ ನಿರ್ವಹಿಸುವುದರೊಂದಿಗೆ ಉಕ್ರೇನ್ ದಲ್ಲಿ ಸಿಲುಕಿಕೊಂಡಿದ್ದ 22 ಸಾವಿರ ಭಾರತೀಯ ರಕ್ಷಿಸಿದ ಧೀಮಂತ ನಾಯಕ ನರೇಂದ್ರ ಮೋದಿಯವರ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಹೇಳಿದರು.

 

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಜರುಗಿದ ಜಿಲ್ಲಾ ಓಬಿಸಿ ಮೋರ್ಚಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದ ಯಾವುದೇ ರಾಷ್ಟ್ರಗಳು ಉಕ್ರೇನ್_ರಷ್ಯಾಯ ಯುದ್ಧದ ಸಂದರ್ಭದಲ್ಲಿ ತಮ್ಮ ಪ್ರಜೆಗಳ ಬಗ್ಗೆ ಕಾಳಜಿ ತೋರದ ಸಂದರ್ಭದಲ್ಲಿಯೂ ವಿದೇಶದಲ್ಲಿ ಸಿಲುಕಿಕೊಂಡರು ಭಾರತೀಯರನ್ನು ರಕ್ಷಿಸುವ ಮೂಲಕ ವಿದೇಶಗಳು ಭಾರತದ ಕ್ರಮ ಅನುಸರಿಸುವಂತೆ ಮಾಡಿದ ಮೋದಿಜಿಯವರ ಕಾರ್ಯಕ್ಷಮತೆ ಇಡೀ ವಿಶ್ವದ ಜನತೆ ಕೊಂಡಾಡುತ್ತಿದ್ದಾರೆ.

 

ಭಾರತೀಯ ಜನತಾ ಪಾರ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದರೆ ಸಾವಿರಾರು ಜನರ ಸಮರ್ಪಣೆ ಹಾಗೂ ಇಂದಿಗೂ ಲಕ್ಷಾಂತರ ಜನ ಕಾರ್ಯಕರ್ತರು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಬಿಜೆಪಿಯ ಭದ್ರಕೋಟೆಯಾಗಿದ್ದು ಪದಾಧಿಕಾರಿಗಳು ಕೇವಲ ಚುನಾವಣೆ ಬಂದಾಗ ಮಾತ್ರ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದೆ
ಪ್ರತೀಕ್ಷಣದಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸದಲ್ಲಿ ನಿರತರಾಗಬೇಕೆಂದರು.

 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಹಾಗೂ ಸಂದೀಪ್ ದೇಶಪಾಂಡೆ ಮಾತನಾಡಿ, ಪಕ್ಷ ಸಂಘಟನೆಗಾಗಿ ಪ್ರತಿಯೊಬ್ಬರೂ ಸಮಯ ನೀಡಬೇಕು ಪಕ್ಷದ ತತ್ವ ಸಿದ್ಧಾಂತದಡಿ ಕಾರ್ಯ ನಿರ್ವಹಿಸಬೇಕು ಪಕ್ಷ ಬಲವಾಗಿದ್ದರು ಕಾರ್ಯಕರ್ತರು ಪ್ರತಿಕ್ಷಣ ಭೂತ ಮಟ್ಟದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಚಟುವಟಿಕೆಗಳನ್ನು ನಿರಂತರ ಮುನ್ನಡೆಸಿಕೊಂಡು ಹೋದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗುವಲ್ಲಿ ಸಂಶಯವಿಲ್ಲ ಎಂದರು.

ಬೆಳಗಾವಿ ವಿಭಾಗ ಸಹ- ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸಂಘಟನಾತ್ಮಕ ವಿಷಯಗಳನ್ನು ಮೋರ್ಚಾ ಪದಾಧಿಕಾರಿಗಳಿಗೆ ತಿಳಿಸಿದರು ಇದೇ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ನೂತನ ಅಧ್ಯಕ್ಷರಾಗಿ ಉಮೇಶ್ ಪುರಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಭೀಮಸ್ಸಿ ಮೆಳೆದವರು ಪದಗ್ರಹಣ ಮಾಡಿದರು ವೇದಿಕೆ ಮೇಲೆ ರಾಜ್ಯ ಓಬಿಸಿ ಮೋರ್ಚಾ ಸಂಯೋಜಕ ವಿಲಾಸ್ ಪವಾರ್ ಇದ್ದರು.

ಕಾರ್ಯಕ್ರಮದಲ್ಲಿ ಸುರೇಶ ಮ್ಯಾಕಲ್, ದುಂಡೇಶ ಗರಗದ, ನಾಗರಾಜ ಪಾಟೀಲ, ಬಸವರಾಜ ಹಡಪದ ಮುಂತಾದವರು ಇದ್ದರು.  ಸಂತೋಷ್ ಹಡಪದ್ ಕಾರ್ಯಕ್ರಮ ನಿರೂಪಿಸಿದರು. ಈರಪ್ಪ ಬಡಿಗೇರ ಸ್ವಾಗತಿಸಿದರು ವೀರಭದ್ರ ಪುಜಾರಿ ವಂದಿಸಿದರು