Belagavi News In Kannada | News Belgaum

ಏಪ್ರಿಲ್ 9 ರ ಒಳಗಾಗಿ ಬಸವಣ ಗಲ್ಲಿ ಬಸವಣ್ಣ ದೇವರಿಗೆ ಭಕ್ತಾಧಿಗಳು ಗುಗ್ಗಳ ಮಾಡಿಸಲು ಹೆಸರು ನೊಂದಣಿ

ಬೆಳಗಾವಿ : ಬೆಳಗಾವಿಯ ಬಸವಣ ಗಲ್ಲಿ ಬಸವಣ್ಣ ದೇವರ(ದೇವಸ್ಥಾನ) ಜಾತ್ರೆಯು ಏಪ್ರಿಲ್ 03 ರಂದು ಜರುಗುತ್ತಿದ್ದು, ಬಸವಣ್ಣ ದೇವರಿಗೆ ಗುಗ್ಗಳ ಮಾಡಿಸುವವರು ಏಪ್ರಿಲ್ 9 ರ ಒಳಗಾಗಿ ಭಕ್ತಾದಿಗಳು ಹೆಸರನ್ನು ನೊಂದಾಯಿಸಬೇಕು ಎಂದು ಬಸವಣ್ಣ ದೇವಸ್ಥಾನ ಕಮೀಟಿಯ ಅಧ್ಯಕ್ಷರಾದ ರತ್ನಾಕರ ಕಲಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಣ್ಣ ದೇವಸ್ಥಾನದ ಜಾತ್ರೆಯು 2022 ಏಪ್ರಿಲ್ 3 ರಂದು ಜರುಗುತ್ತಿದ್ದು, ಈ ನಿಮಿತ್ಯ ಸಾಮೂಹಿಕ ಗುಗ್ಗಳ ಕಾರ್ಯಕ್ರಮವನ್ನು ಏಪ್ರಿಲ್ 10 ರಂದು ಹಮ್ಮಿಕೊಳ್ಳಲಾಗಿದೆ. ಕಾರಣ ಗುಗ್ಗಳವನ್ನು ಮಾಡಿಸಿಕೊಳ್ಳುವ ಭಕ್ತಾಧಿಗಳು ತಮ್ಮ ವಿವರಗಳನ್ನು ಏಪ್ರಿಲ್ 9 ರ ಒಳಗಾಗಿ ಬೆಳಗಾವಿ ಬಸವಣ ಗಲ್ಲಿ, ಬಸವಣ್ಣ ದೇವಸ್ಥಾನದ ಅರ್ಚಕರಿಗೆ ನೀಡಬೇಕೆಂದು ದೇವಸ್ಥಾನ ಕಮೀಟಿ ಅಧ್ಯಕ್ಷರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಬಸವಣ್ಣ ದೇವಸ್ಥಾನದ ಅರ್ಚಕರಾದ  ಶಿವಾನಂದ ಶಾಸ್ತ್ರಿಗಳು ಹಿರೇಮಠ ಇವರ ಮೊಬೈಲ್ ಸಂಖ್ಯೆ 9483316530 ಗೆ ಸಂಪರ್ಕಿಸಬಹುದು.