Belagavi News In Kannada | News Belgaum

ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ ಮಾಡಿದ ಕಿರಾತಕರು

ನವದೆಹಲಿ: ಉದ್ಯಮಿಯ ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ‌ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿ ಸಮಯ ರಸ್ತೆಯೊಂದರಲ್ಲಿ ಸ್ಕೂಟಿ ಸವಾರನೊಬ್ಬ ಸೆಡಾನ್ ಚಾಲಕನೊಂದಿಗೆ ಜಗಳವಾಡುತ್ತಾನೆ. ಸ್ಕೂಟಿಯಲ್ಲಿ ಬಂದ ವ್ಯಕ್ತಿ ಮಾರಕಾಸ್ತ್ರ ಹಿಡಿದು ಕಾರಿನೊಳಗಿದ್ದ ಉದ್ಯಮಿ ಹಾಗೂ ಇತರ ಇಬ್ಬರಿಗೆ ಬೆದರಿಕೆ ಹಾಕಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಇದ್ದಕ್ಕಿದ್ದಂತೆ ಮೂವರು ಹಿಂದಿನಿಂದ ಓಡಿ ಬಂದು ಕಾರಿನ ಮುಂಭಾಗದ ಡ್ರೈವರ್ ಪಕ್ಕದ ಕಿಟಕಿಗೆ ಹೊಡೆದು ಗಾಜು ಒಡೆದು ಹಾಕುತ್ತಾರೆ, ಬಳಿಕ‌ ಕಾರನ್ನು ಅನ್ ಲಾಕ್ ಮಾಡಿ ಕಾರಿನ ಹಿಂಭಾಗದಲ್ಲಿ ಇದ್ದ ಹಣದ ಚೀಲ ದೋಚುತ್ತಾರೆ.
ಈ ಘಟನೆಯಲ್ಲಿ ಉದ್ಯಮಿ ನರೇಂದ್ರ ಕುಮಾರ್ ಅಗರ್ವಾಲ್ ಮತ್ತು ಅವರ ಸಂಬಂಧಿ ಕರಣ್ ಅಗರ್ವಾಲ್ ಕಾರ್ ನಲ್ಲಿ ಇರಿಸಿದ್ದ2 ಕೋಟಿ ರೂ.ನಷ್ಟು ಹಣವಿದ್ದ ಬ್ಯಾಗ್ ಕಳೆದುಕೊಂಡಿದ್ದಾರೆ.
ಹಳೆ ದೆಹಲಿಯ ಚಾಂದಿನಿ ಚೌಕ್‌ನಿಂದ ಉದ್ಯಮಿ ಬರುತ್ತಿದ್ದರು. ಹಣವನ್ನು ಎಲ್ಲಿ ಇಡಲಾಗಿದೆ ಎಂಬುದು ಗೊತ್ತಾದಾಗಿನಿಂದ ದರೋಡೆಕೋರರು ಅವರನ್ನು ಅಲ್ಲಿಂದಲೇ ಪತ್ತೆ ಹಚ್ಚಿರಬಹುದು ಎಂದು ಅಂದಾಜಿಸಲಾಗಿದೆ.//////