Belagavi News In Kannada | News Belgaum

ಸದನದಲ್ಲಿ ಗದ್ದಲವೆಬ್ಬಿಸಿದ 8 ಶಾಸಕರನ್ನು ಹೊತ್ತು ತಂದು ಹೊರಹಾಕಿದ ಮಾರ್ಷಲ್‍ಗಳು

ಪಾಟ್ನಾ: ಬಿಹಾರದ ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಗದ್ದಲವೆಬ್ಬಿಸಿ ಚರ್ಚೆಗೆ ಅವಕಾಶ ಮಾಡಿಕೊಡದ ಕಾರಣ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾಕ್ರ್ಸಿಸ್ಟ್-ಲೆನಿನಿಸ್ಟ್ (ಸಿಪಿಐ-ಎಮ್‍ಎಲ್) ಶಾಸಕರನ್ನು ಮಾರ್ಷಲ್‍ಗಳು ಹೊತ್ತು ತಂದು ಹೊರ ಹಾಕಿದ ಘಟನೆ ನಡೆಯಿತು.
ಬಿಹಾರ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಕುರಿತಾಗಿ ಚರ್ಚಿಸುವ ವೇಳೆ ಸರ್ಕಾರಕ್ಕೂ ಪ್ರತಿಪಕ್ಷದ ಶಾಸಕರಿಗೂ ಗದ್ದಲ ಏರ್ಪಟ್ಟಿದೆ. ಬಳಿಕ ಸದನದಲ್ಲಿದ್ದ ಮಾರ್ಷಲ್‍ಗಳು ಗದ್ದಲವೆಬ್ಬಿಸಿದ 8 ಶಾಸಕರನ್ನು ಹೊತ್ತು ತಂದು ಹೊರ ಹಾಕಿದ್ದಾರೆ.

ಮಾರ್ಷಲ್‍ಗಳು ಸಚಿವರನ್ನು ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಹೊತ್ತು ತಂದು ಹೊರ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿಐ-ಎಮ್‍ಎಲ್ ಶಾಸಕ ಬೀರೇಂದ್ರ ಪ್ರಸಾದ್ ಗುಪ್ತಾ, ರಾಜ್ಯದಲ್ಲಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಮತ್ತು ದರ ಏರಿಕೆ ಕುರಿತಾಗಿ ಚರ್ಚೆ ನಡೆಸಲು ಮುಂದಾದಾಗ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿಲ್ಲ. ಅಲ್ಲದೆ ನಮ್ಮ ಶಾಸಕರನ್ನು  ಹೊರ ಹಾಕಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ./////