Belagavi News In Kannada | News Belgaum

ಬೆಳಗಾವಿ ಜಿಲ್ಲೆಯ ಐವರು ಪೊಲೀಸ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಬೆಳಗಾವಿ: ಜಿಲ್ಲೆಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸದ ಐವರು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ  ಮುಖ್ಯಮಂತ್ರಿಗಳ ಚಿನ್ನದ ಪದಕ ಸಂದಿದೆ.

ರಾಜ್ಯ ಸರ್ಕಾರ ರಾಜ್ಯದಲ್ಲಿನ ಪೊಲೀಸ್‌ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 135 ಪೊಲೀಸ್‌ ಅಧಿಕಾರಿಗಳಿಗೆ  ಮುಖ್ಯಮಂತ್ರಿಗಳ ಪದಕ  ನೀಡಲು ರಾಜ್ಯ ಸರ್ಕಾರ  ನಿರ್ಧರಿಸಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಐವರು ದಕ್ಷ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಈ ಪದಕ ಸಿಕ್ಕಿದ್ದು, ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ.

ರಾಜ್ಯ ಸರ್ಕಾರ ಇಂದು ಪದಕ ಪಡೆದ ಪೊಲೀಸ್‌ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು. ಅದರಲ್ಲಿ ಬೆಳಗಾವಿಯ  ಎಸಿಬಿ ಸಿಪಿಐ ಅಡಿವೆಪ್ಪ ಗುದಿಗೊಪ್ಪ, ಹೀರೆಬಾಗೇವಾಡಿಯ ಠಾಣೆಯ ಸಿಪಿಐ ವಿಜಯಕುಮಾರ್‌ ಎನ್‌ ಸಿನ್ನೂರ, ಸಂಕೇಶ್ವರ ಠಾಣೆ ಪಿಎಸ್‌ಐ ಗಣಪತಿ ಕೊಂಗನೊಳಿ, ಕೆಎಸ್ಆರ್‌ಪಿ ೨ನೇ ಪಡೆಯ  ಯಲ್ಲಪ್ಪ ಭಜಂತ್ರಿ, ಡಿಎಆರ್‌ ನ ಮಹಾದೇವಪ್ಪ ಈರಪ್ಪ ಕೋಟಿವಾಲೆ, ಗುಪ್ತಚರ  ಇಲಾಖೆಯ ಹಿರಿಯ ಸಹಾಯಕ ರಾಜೇಂದ್ರ ಬಡೇಸಗೋಳ ಅವರು ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದಾರೆ.

ಇನ್ನೂ 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪದಕ ಪ್ರದಾನ ಸಮಾರಂಭ ಇದೇ ಏ 2 ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆಯಲಿದೆ.//////