Belagavi News In Kannada | News Belgaum

ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

 

ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ

ದಿನಾಂಕ ೩೦-೦೩-೨೦೨೨ ರಂದು ಬೆಳಗಾವಿ ತಾಲೂಕಿನ ಅಷ್ಟೇ ಗ್ರಾಮದಲ್ಲಿ ಕರ್ನಾಟಕ ಕಾನೂನು ಸಂಸ್ಥೆಯ ರಾಜ ಲಖಮಗೌಡ ಕಾನೂನು ಮಹಾವಿದ್ಯಾಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ಮತ್ತು ಗ್ರಾಮ ಪಂಚಾಯತಿ ಅಷ್ಟೇ ಗ್ರಾಮದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನೆರವೇರಿತು.

ಶ್ರೀ ಎ. ವಿ. ಶ್ರೀನಾಥ್, ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ನ್ಯಾಯಾಧೀಶರು ಕಾನೂನಿನ ಅರಿವಿನ ಮಹತ್ವವನ್ನು ತಿಳಿಸಿದರು. ಪ್ರಸ್ತುತ ದಿನಮಾನದಲ್ಲಿ ಕಾನೂನಿನ ಅರಿವಿನ ಅವಶ್ಯಕತೆಯ ಬಗ್ಗೆ ತಿಳಿಸಿದರು ಮತ್ತು ಕಾನೂನು ವಿದ್ಯಾರ್ಥಿಗಳು ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರಬೇಕೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತ ಶ್ರೀ ಮಹಾಂತೇಶ್ ಮುರುಗೋಡ್, ತೋಟಗಾರಿಕೆ ಉಪನಿರ್ದೇಶಕರು, ಮಾತನಾಡುತ್ತ ಗ್ರಾಮಸ್ಥರಿಗೆ ಇಲಾಖೆಯಿಂದ ಒದಗಿಸಲಾಗುವ ಸೌಲಭ್ಯದ ಬಗ್ಗೆ ತಿಳಿಸಿದರು.

ಮತ್ತೋರ್ವ  ಸಂಪನ್ಮೂಲ ವ್ಯಕ್ತಿಗಳಾದಂತ ಶ್ರೀ ಶಿವನಗೌಡ ಎಸ್ ಪಾಟೀಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ  ಮಾತನಾಡುತ್ತ ಗ್ರಾಮಸ್ಥರಿಗೆ  ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಹಾಗೂ ಕೃಷಿ ಇಲಾಖೆಯಿಂದ ಒದಗಿಸಲಾಗುವ ಸೌಲಭ್ಯದ ಬಗ್ಗೆ ವಿವರವಾಗಿ ತಿಳಿಸಿದರು..

ಮತ್ತೋರ್ವ ಸಂಪನ್ಮೂಲ  ವ್ಯಕ್ತಿಗಳಾದಂತಹ ಶ್ರೀ ಶಿವಾನಂದ್ ಮಗದುಮ್,  ರೇಂಜ್ ಆಫೀಸರ್, ಅರಣ್ಯ ಇಲಾಖೆ ಮಾತನಾಡುತ್ತ ಪರಿಸರದ ಮಹತ್ವವನ್ನು ತಿಳಿಸಿದರು. ಮುಂದುವರೆಯುತ್ತ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ ಮರ ಗಿಡಗಳನ್ನು ಬೆಳಸಲು ತಿಳಿಸಿದರು.

ಕಾರ್ಯಕ್ರಮದ ಮತ್ತೋರ್ವ ಸಂಪನ್ಮೂಲ  ವ್ಯಕ್ತಿಗಳಾದಂತಹ ಸುಭಾಷ್ ಹಳ್ಯಾಳ್, ಸೆಕ್ಷನ್ ಆಫೀಸರ್, ಹೆಸ್ಕಾಂ ಮಾತನಾಡಿ ವಿದ್ಯುತ್ ಬಳಕೆಯ ಬಗ್ಗೆ ಅರಿವನ್ನು ಮೂಡಿಸಿದರು. ಇಲಾಖೆಯಿಂದ ಒದಗಿಸಲಾಗುವ ವಿವಿಧ ಸೌಲಭ್ಯಗಳ ಬಗ್ಗೆ ಸವಿವರವಾಗಿ ತಿಳಿಸಿದರು ಮತ್ತು ಕಾನೂನು ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಶ್ರೀ ಚೇತನ್ ಕುಮಾರ್, ಸಹಾಯಕ ಪ್ರಾದ್ಯಾಪಕರು, ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿ  ಮಾತನಾಡಿ ಕಾನೂನಿನ ಅವಶ್ಯಕತೆಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಡಾ. ಎ. ಹೆಚ್. ಹವಾಲ್ದಾರ, ಪ್ರಾಂಶುಪಾಲರು, ರಾಜ ಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿ  ಮಾತನಾಡಿ ಕಾನೂನಿನ ಉಪಯೋಗದ ಬಗ್ಗೆ ತಿಳಿಸಿದರು.

ವಿದ್ಯಾರ್ಥಿಗಳಾದ ಸಚಿನ್ ಸ್ವಾಗತಿಸಿದರು, ವಿದ್ಯಾಶ್ರೀ ವಂದಿಸಿದರು. ನಿಧಿ ಅಗರ್ವಾಲ್ ಮತ್ತು ಪ್ರದೀಪ್ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.