Belagavi News In Kannada | News Belgaum

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ

ಬೆಳಗಾವಿ:  ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಭೀಕರ ಅಪಘಾತ ಸಂಭವಿಸಿದ್ದು, ಉತ್ತರ ಪ್ರದೇಶದ ಯುವಕನೋರ್ವ ಸ್ಥಳದಲ್ಲೆ  ಮೃತ ಘಟನೆ ಇಂದು ಮದ್ಯಾಹ್ನ ನಡೆದಿದೆ.  ಜತೆಯಲ್ಲಿದ್ದ ಇನ್ನೋರ್ವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲತ:  ಉತ್ತರ ಪ್ರದೇಶದವರೆನ್ನಲಾದ ಸುನಿಲಕುಮಾರ ಪನ್ನಾಳೆ ( 23) ಮೃತ ಯುವಕ.   ಸಂಕೇಶ್ವರ ನಗರದ ಹೊರ ವಲಯದ ಘಟನೆ  ಸಂಭವಿಸಿದೆ.  ಯುವಕ ಕೆಲಸದ ವಿಷಯವಾಗಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳಗಾವಿಯತ್ತ ಸಂಚರಿಸುವ ವೇಳೆ ಮಾರ್ಗದ ಮಧ್ಯೆ ಬೈಕ್‌ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.  ಮಾಹಿತಿ   ಪರಿಶೀಲಿಸಿ ಪೋಷಕರಿಗೆ ತಿಳಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./