ಪತ್ನಿ ಮೇಲಿನ ವ್ಯಾಮೋಹಕ್ಕೆ ತಾಯಿಯನ್ನೇ ನದಿಯಲ್ಲಿ ಮುಳುಗಿಸಿ ಕೊಂದ ಕ್ರೂರ ಮಗ

ಯಾದಗಿರಿ : ಹೆಂಡತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯನ್ನೇ ನದಿಯಲ್ಲಿ ಮುಳುಗಿಸಿ ಮಗನೇ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಶಿರವಾಳದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿಳವಾರ ಗ್ರಾಮದ ನಿವಾಸಿ ರಾಚಮ್ಮ ಮೃತ ದುರ್ದೈವಿ. ಪುತ್ರ ನಾಗಣ್ಣನನ್ನು ಬಂಧಿಸಲಾಗಿದೆ.
ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಾಳೆ ಎಂಬ ಕಾರಣಕ್ಕೆ ನಾಗಣ್ಣ, ಸ್ನೇಹಿತನ ಜೊತೆ ಸೇರಿ ನದಿಗೆ ತಳ್ಳಿ ಹತ್ಯೆಗೈದಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಭೀಮರಾಯನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗಣ್ಣ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ./