Belagavi News In Kannada | News Belgaum

ಡಾ.ಅಂಬೇಡ್ಕರ್ ಜಯಂತಿ ಹಾಗೂ ಗುಡ್‍ಫ್ರೈಡೆ ವಿಶೇಷ ಬಸ್ ವ್ಯವಸ್ಥೆ

ಬೆಳಗಾವಿ: ಅಂಬೇಡ್ಕರ್ ಜಯಂತಿ ಹಾಗೂ ಗುಡ್ ಫ್ರೈಡೆ ಸಾರ್ವತ್ರಿಕ ರಜೆಗಳ ಹಿನ್ನೆಲೆ ಬೆಂಗಳೂರು, ಮುಂಬಯಿ ಮತ್ತು ಪೂನಾಗಳಿಂದ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂಬೇಡ್ಕರ್ ಜಯಂತಿ ಕಾರಣ ಏಪ್ರಿಲ್ 14 ರಂದು, ಗುಡ್ ಫ್ರೈಡೆಯ ಏಪ್ರಿಲ್ 15 ರಂದು, ಏಪ್ರಿಲ್ 16 ರಂದು ಪರಮಿತ ರಜೆ ಹಾಗೂ ಏಪ್ರಿಲ್ 17 ರಂದು ಭಾನುವಾರ(ಸಾರ್ವತ್ರಿಕ ರಜೆ) ಇರುವುದರಿಂದ ಬೆಂಗಳೂರಿನಿಂದ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವಂಥ ಪ್ರಯಾಣಿಕರಿಗೆ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ಏಪ್ರಿಲ್ 13 ರಂದು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ, ಮುಂಬಯಿ ಮತ್ತು ಪೂನಾಗಳಿಂದ ಬೆಳಗಾವಿಗೆ ವಿವಿಧ ಮಾದರಿಯ ಒಟ್ಟು 30 ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಮರಳಿ ಬೆಳಗಾವಿಯಿಂದ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ, ಮುಂಬಯಿ ಮತ್ತು ಪೂನಾಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಈ ಸಾರಿಗೆಗೆ ಇ- ಟಿಕೆಟ್‍ನ್ನು

ಮೊಬೈಲ್ ಮುಖಾಂತರವೂ ಪಡೆಯಬಹುದಾಗಿದೆ. ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿಯ ವಿವಿಧ ಸ್ಥಳಗಳಲ್ಲಿ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜೆಂಟ್‍ರಲ್ಲಿಯೂ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ವಾ.ಕ.ರ.ಸಾ.ಸಂಸ್ಥೆಯ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./