Belagavi News In Kannada | News Belgaum

ಸಾರಾಯಿ ತುಂಬಿದ ಗಾಡಿ ಪಲ್ಟಿ..! ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟ ಪ್ರಕರಣ…!?

 

ಬೆಳಗಾವಿ- ಜಿಲ್ಲೆಯಲ್ಲಿ ಅಕ್ರಮ ಹಾಗೂ ನಕಲಿ ಮದ್ಯಗಳ

ಹಾವಳಿ ಹೆಚ್ಚಾಗಿದೆ ಎಂದು ಆರೋಪಗಳು ಮೇಲಿಂದ ಮೇಲೆ‌ ಕೇಳಿಬರುತ್ತಿರುವ ಹೊತ್ತಿನಲ್ಲಿ ಇಂದು ಬೆಳಗಾವಿ ನಗರದಲ್ಲಿ ಮದ್ಯ ಹೊತ್ತಿದ್ದ ಒಂದು ಲಾರಿ (407) ಪಲ್ಟಿ ಆಗಿದಕ್ಕೆ ಸಾರ್ವಜನಿಕರ ಬಾಯಲ್ಲಿ ಆಹಾರವಾಗಿದೆ.

ಬಾರ್ ಮಾಲಿಕರು

ಹೌದು ಹನುಮಾನ ನಗರದ ಬಾಕ್ಸಟ್ ರಸ್ತೆಯಲ್ಲಿ ಗಾಡಿ ಪಲ್ಟಿಯಾಗಿದ್ದು ಬಾರ್ ಮಾಲಿಕರ ಹೇಳಿಕೆಯ ಪ್ರಕಾರ ಲಾರಿಗೆ ಬ್ರೇಕ್ ಫೇಲ್ ಆಗಿತ್ತು, ನಿಯಂತ್ರಣ ಸಿಗದೆ ಲಾರಿ ಪಲ್ಟಿ ಆಗಿದೆ, ಅಂದಾಜು 5-10 ಲಕ್ಷ ರೂಪಾಯಿಯ ನಷ್ಟವಾಗಿರಬಹುದು ಎಂದು ಹೇಳಿದ್ದಾರೆ.

ಲಾರಿ ಜಖಂ ಆಗಿದ್ದು ಅಳಿದುಳಿದ ಮದ್ಯವನ್ನ ಬೇರೆ ಲಾರಿಗೆ ಶೀಪ್ಟ್ ಮಾಡಿ ಅಬಕಾರಿ ಇಲಾಖೆಯ ಅಧಿಕಾರಿಗಳು ಮುಂದಿನ ತನಿಖೆ ಮಾಡ್ತಿವಿ ಎಂದಿದ್ದಾರೆ.

ಅಬಕಾರಿ ಅಧಿಕಾರಿ ಲಿಂಗರಾಜ

KA23 4644 ಲಾರಿ ಪಲ್ಟಿ ಆಗಿದಕ್ಕೆ ಪ್ರಕರಣ ದಾಖಲಿಸಿಕೊಂಡು ಪಂಚನಾಮೆ ಮಾಡಿ, ಸಧ್ಯ ಉಳಿದಿರುವ ಮದ್ಯವನ್ನ ಅಬಕಾರಿ ಕಛೇರಿಗೆ ಓಯ್ದು ಬೇರೆ ಪಾಸ್ ಕೊಡ್ತಿವಿ, ಹಾಗೂ ಈ ಪ್ರಕರಣದ ಬಗ್ಗೆ ಕೂಲಕುಂಶವಾಗಿ ತನಿಖೆ ಮಾಡ್ತಿವಿ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಲಿಂಗರಾಜ ನಮ್ಮ ಬೆಳಗಾವಿ ವರದಿ ದಿನಪತ್ರಿಕೆ ಗೆ ಮಾಹಿತಿ ಕೊಟ್ಟಿದ್ದಾರೆ.