Belagavi News In Kannada | News Belgaum

ಅಕ್ಕನ ಮಗಳ ಮೇಲೆ ಸೋದರ ಮಾವನಿಂದಲೇ ದುಷ್ಕೃತ್ಯ: ಅಪ್ರಾಪ್ತೆ ಬಾಲಕಿ 3 ತಿಂಗಳ ಗರ್ಭಿಣಿ, ಕಾಮುಕ ಅರೆಸ್ಟ್..!‌

ಬೆಳಗಾವಿ: ಸೋದರ ಮಾವನೇ ಅಪ್ರಾಪ ಬಾಲಕಿ ಮೇಲೆ ದುಷ್ಕೃತ್ಯ ಎಸಗಿದ್ದು,  ಅಕ್ಕನ ಮಗಳು 3 ತಿಂಗಳು ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕಾಕತಿ ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬೆಕ್ಕಿನಕೇರಿ ಗ್ರಾಮದ 28 ವರ್ಷದ ಯುವಕ. ಸಂತ್ರಸ್ತೆ ಬಾಲಕಿ(17),  ಸೋದರ ಮಾವ ಎನ್ನುವ ಕಾರಣಕ್ಕೆ ಬಾಲಕಿ ಸಲುಗೆಯಿಂದ ಇದ್ದಳಂತೆ,  ಇದನ್ನು ದುರುಪಯೋಗ ಮಾಡಿಕೊಂಡು ಮಾವ,  ಬಾಲಕಿಯನ್ನು ಪುಸಲಾಯಿಸಿ  ನಿತ್ಯವೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಪೋಷಕರಿಗೆ ಈ ವಿಷಯ ತಿಳಿಸದಂತೆ ಬೇದರಿಕೆ ಹಾಕಿದ್ದಾನೆ.  ಇದೇ ಕಾರಣಕ್ಕೆ ಬಾಲಕಿ ಸುಮ್ಮನಾಗಿದ್ದು, ಅದಾಗಲೇ  ಮೂರು ತಿಂಗಳು ಗರ್ಭಿಣಿಯಾಗಿದ  ಬಳಿಕ ಬಾಲಕಿ ಶಾಕ್‌ ಆಗಿ,   ಪೊಲೀಸ್‌ ಠಾಣೆ ಮೇಟ್ಟಿಲೇರಿದ್ದಾಳೆ.

ಕಾಕತಿ  ಪೊಲೀಸ್‌ ರು ದೂರು (ಪೋಕ್ಸೋ ) 2012 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.//////