ಬೆದರಿಕೆ ಹಿನ್ನೆಲೆ ಅಣ್ಣಾಮಲೈ ಗೆ ಭದ್ರತೆ

ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ , ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ಕೇಂದ್ರ ಗೃಹ ಸಚಿವಾಲಯ ‘ವೈ’ ಕೆಟಗರಿ ಭದ್ರತೆ ಒದಗಿಸುತ್ತಿದೆ.
ಸಿಆರ್ಪಿಎಫ್ ಯೋಧರು ಸಿಂಗಂ ಖ್ಯಾತಿಯ ಮಾಜಿ ಪೊಲೀಸ್ ಅಧಿಕಾರಿಗೆ ಭದ್ರತೆಯನ್ನು ನೀಡಲಿದ್ದಾರೆ.ಇದುವರೆಗೆ ರಾಜ್ಯ ಪೊಲೀಸರು ಅವರಿಗೆ ಭದ್ರತೆ ಒದಗಿಸುತ್ತಿದ್ದರು.
ಪಕ್ಷ ಸಂಘಟನೆ ಮತ್ತು ಹೋರಾಟಗಳಲ್ಲಿ ಸಕ್ರಿಯ ವಾಗಿರುವ ಅಣ್ಣಾಮಲೈ ಅವರಿಗೆ ಬೆದರಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಭದ್ರತೆ ಹೆಚ್ಚಳ ಮಾಡಿದೆ.
ತಮಿಳುನಾಡಿನ ಬಿಜೆಪಿ ನಾಯಕ ಎಲ್. ಮುರುಗನ್ ಕೇಂದ್ರ ಸಚಿವರಾಗಿ ನೇಮಕಗೊಂಡ ನಂತರ, ಅಣ್ಣಾಮಲೈ ಅವರನ್ನು ಜುಲೈ 2021 ರಲ್ಲಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು./////