Belagavi News In Kannada | News Belgaum

ತಂದೆಯೊಂದಿಗೆ ಬಟ್ಟೆ ತೊಳೆಯಲು ಹೋದ 6 ವರ್ಷದ ಬಾಲಕ ನೀರುಪಾಲು

ವಿಜಯಪುರ: ತಂದೆಯೊಂದಿಗೆ ಬಟ್ಟೆ  ತೊಳೆಯಲು ಹೋಗಿ ಕಾಲುವೆಗಿಳಿದ 6 ವರ್ಷದ ಬಾಲಕ ನೀರುಪಾಲಾಗಿರುವ ಘಟನೆ ಇಂದು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಹಿಬೂಬನಗರ ನಡೆದಿದೆ. ಮಗನ ಶವ ಕಂಡು ಪೋಷಕರ ಆಕ್ರಂದನ ಮುಗ್ಗಿಲು ಮುಟ್ಟಿದೆ.

ಮುದ್ದೇಬಿಹಾಳ ಪಟ್ಟಣದ ಮಹಿಬೂಬ ನಗರ ನಿವಾಸಿ ರಿಜ್ವಾನ್ ಅಲ್ಲಾಭಕ್ಷ ತಾರಾಘರ(6) ಮೃತ ಬಾಲಕ. ಶುಕ್ರವಾರ ಸಾಯಂಕಾಲ ತಂದೆ ಜತೆ  ಹೊರವಲಯದ ಶಿರೋಳ ಬಳಿಯ ಚಿಮ್ಮಲಗಿ ಏತ ನೀರಾವರಿ ಮುಖ್ಯ ಕಾಲುವೆಗೆ  ಬಟ್ಟೆ ತೊಳೆಯಲು ಹೋಗಿದ್ದಾನೆ.  ಆತನ ತಂದೆ ಬಟ್ಟೆ ತೊಳೆಯುವಲ್ಲಿ ಮಗ್ನರಾಗಿದ್ದು, ಮಗ ಕಾಲುವೆಗೆ ಇಳಿದಿರುವುದನ್ನು ಗಮನಿಸಿಲ್ಲ. ಈ ವೇಳೆ ಕಾಲು ಜಾರಿಬಿದ್ದು ನೀರಿನ ಸಳೆತ್ತಕ್ಕೆ ಸ್ವಲ್ಪ ದೂರ ಹೋಗಿದ್ದಾನೆ. ಕೆಲವೊತ್ತಿನ ಬಳಿಕ ಮಗ ಕಾಣದೇ ಇದಾಗ ,  ಹುಡುಕಾಟ ನಡೆಸಿದಾರೆ. ಮನೆಗೆ ಬಂದು ನೋಡಿದರು ಆತ ಬಂದಿರಲಿಲ್ಲ,  ಸಂಜೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರೊಂದಿಗೆ ಶೋದ ನಡೆಸಿದರೂ ಶವ ಸಿಕ್ಕಿರಲಿಲ್ಲ. ಶವ ಶನಿವಾರ ಮುಂಜಾನೆ ಶವಪತ್ತೆಯಾಗಿದ್ದು ಸಾರ್ವಜನಿಕರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು,  ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿದ್ದಾರೆ./////