ಅಕ್ರಮವಾಗಿ ಸಾಗಿಸುತ್ತಿದ್ದ 10 ಕೆಜಿ ಚಿನ್ನ, 5 ಕೋಟಿ ಹಣ ಪತ್ತೆ

ಆಂಧ್ರಪ್ರದೇಶ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ ಮಾರಾಟ, ಖರೀದಿ ಜೋರಾಗಿದೆ. ಇದನ್ನೇ, ಬಂಡವಾಳವನ್ನಾಗಿ ಮಾಡಿಕೊಂಡು ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ 10 ಕೆಜಿ 100 ಗ್ರಾಂ ಚಿನ್ನ, 5.6 ಕೋಟಿ ರೂ. ನಗದು ವಶಪಡಿಸಿಕೊಂಡ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಪೂರ್ವ ಗೋದಾವರಿ ಜಿಲ್ಲೆಯ ಕಿರ್ಲಂಪುಡಿ ವಲಯದಲ್ಲಿ ಖಾಸಗಿ ಬಸ್ನಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಸಾಗಣೆ ಮಾಡಲಾಗುತ್ತಿತ್ತು.ಈ ವೇಳೆ, ಕೃಷ್ಣಾವರಂ ಟೋಲ್ ಪ್ಲಾಜಾದಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಬಸ್ನಲ್ಲಿ 10 ಕೆಜಿ 100 ಗ್ರಾಂ ಚಿನ್ನಾಭರಣ ಹಾಗೂ 5 ಕೋಟಿ 6 ಲಕ್ಷ ನಗದು ಪತ್ತೆಯಾಗಿದೆ. ವಿಜಯವಾಡದಿಂದ ಶ್ರೀಕಾಕುಳಂ ಜಿಲ್ಲೆಗೆ ಈ ಬಸ್ ಸಂಚರಿಸುತ್ತಿತ್ತು.
ಖಾಸಗಿ ಬಸ್ನಲ್ಲಿ ಪತ್ತೆಯಾದ ಈ ಚಿನ್ನ ಪಲಾಸ, ತೆಕ್ಕಲಿ, ನರಸನ್ನಪೇಟೆಯ ಚಿನ್ನದ ಅಂಗಡಿಗಳಿಗೆ ಸಾಗಣೆಯಾಗುತ್ತಿತ್ತು ಎಂದು ತಿಳಿದು ಬಂದಿದೆ. ಪತ್ತೆಯಾದ ಚಿನ್ನ ಮತ್ತು ನಗದಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.//////