Belagavi News In Kannada | News Belgaum

ಬೆಳಗಾವಿ: ಸಹೋದರಿಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ: ಅಣ್ಣ ಸಾವು, ತಮ್ಮನ ಸ್ಥಿತಿ ಚಿಂತಾಜನಕ

: ಅಣ್ಣ ಸಾವು, ತಮ್ಮನ ಸ್ಥಿತಿ ಚಿಂತಾಜನಕ

ಬೆಳಗಾವಿ: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆಗೈದು,  ಆತನ ವಶವನ್ನು ಮನೆಯ ಮುಂದೆ ಬಿಸಾಡಿರುವ ಹೋಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ತಾಲೂಕಿನ ರಣಕುಂಡೆ ಗ್ರಾಮದ ನಾಗೇಶ ಬಾಹುಸಾಹೇಬ ಪಾಟೀಲ( 38) ಮೃತ  ದುರ್ದೈವಿ.   ಸಹೋದರ ಮೋಹನ ಪಾಟೀಲ್ (32) ಗಾಯಗೊಂಡ ವ್ಯಕ್ತಿ. ಭಾರತೀಯ ನೇವಿಯಲ್ಲಿ  ಸೇವೆ  ಸಲ್ಲಿಸುತ್ತಿದ್ದ ನಾಗೇಶ  ಇತ್ತೀಚಿಗೆ ಕೆಲಸಕ್ಕೆ ರಾಜೀನಾಮೆ ನೀಡಿ,  ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ  ಸೇರ್ಪಡೆಯಾಗಿದ್ದಎನ್ನಲಾಗಿದೆ.

ಶನಿವಾರ ರಾತ್ರಿ    ದ್ವಿಚಕ್ರ ವಾಹನದ ಮೇಲೆ ಬಂದ ದುಷ್ಕರ್ಮಿಗಳು  ನಾಗೇಶ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.   ತಲೆಗೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದಿದ್ದರಿಂದ ನಾಗೇಶ ರಕ್ತಸ್ರಾವದಿಂದ  ಅಸ್ತವ್ಯಸ್ತಗೊಂಡು ನರಳಿ ಮೃತಪಟ್ಟಿದ್ದಾನೆ.  ಪಕ್ಕದಲ್ಲಿದ್ದ  ನಾಗೇಶ ಸಹೋದರ ಮೋಹನ ಪಾಟೀಲ್ ಮೇಲೂ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.  ಮೋಹನ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಪಿಐ   ಸುನೀಲಕುಮಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ತನಿಖೆ ಕೈಕೊಂಡಿದ್ದಾರೆ.