Belagavi News In Kannada | News Belgaum

ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿಯವರಿಗೆ ಹಿರೇಕುಂಬಿಯಲ್ಲಿ ಭವ್ಯ ಸ್ವಾಗತ

ಬೈಲಹೊಂಗಲ ಪುರಸಭೆ: ಆಸ್ತಿ ತೆರಿಗೆ ತುಂಬಲು ಏ.30 ಗಡುವು

 

ಬೆಳಗಾವಿ, ಏ.04. : ಬೈಲಹೊಂಗಲ ಪುರಸಭೆಗೆ ಸಂದಾಯ ಮಾಡಬೇಕಾದ 2022-23ನೇ ಸಾಲಿನ ವಾಸ, ವಾಣ ಜ್ಯ, ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ5 ರಷ್ಟು ರಿಯಾಯಿತಿಯಲ್ಲಿ ಏಪ್ರಿಲ್ 30ರೊಳಗೆ ತುಂಬಬೇಕು ಎಂದು ಸೂಚಿಸಲಾಗಿದೆ.

ಏಪ್ರಿಲ್ 1 ರಿಂದ ಜೂನ್ 30ರವರೆಗೆ ರಿಯಾಯಿತಿ ಹಾಗೂ ದಂಡ ಶುಲ್ಕವಿಲ್ಲದೇ ತುಂಬುವುದಕ್ಕೆ ಅವಕಾಶ ಇರುತ್ತದೆ. ನಿಗದಿತ ಅಧಿಯಲ್ಲಿ ತೆರಿಗೆ ನೀಡದಿದ್ದರೇ ಜುಲೈ 2022ರ ರಿಂದ ಪ್ರತಿ ತಿಂಗಳು ಶೇ 2ರಷ್ಟು ದಂಡ ತುಂಬಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 30ರೊಳಗಾಗಿ ನೀರಿನ ಕರ ಟ್ರೇಡ್ ಲೈಸನ್ಸ್, ಮಳಿಗೆ ಬಾಡಿಗೆಯನ್ನು ಪುರಸಭೆಗೆ ಸಂದಾಯ ಮಾಡಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿಯವರಿಗೆ ಹಿರೇಕುಂಬಿಯಲ್ಲಿ ಭವ್ಯ ಸ್ವಾಗತ

 

ಬೆಳಗಾವಿ ಏ.04

: 1992 ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ, 1999 ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ 30 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ಬಂದ ಕ್ಯಾಪ್ಟನ್ ರಾಮಪ್ಪ ಕೊಳ್ಳಿ ಅವರಿಗೆ ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮಸ್ಥರು ಮತ್ತು ಸ್ಥಳೀಯ ಶಾಸಕ,ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮತ್ತಿತರ ಗಣ್ಯರು ಪ್ರೀತಿ ಹಾಗೂ ಗೌರವದ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು,ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ನಿವೃತ್ತ ಸೇನಾಧಿಕಾರಿಗೆ ಗೌರವ ರಕ್ಷೆ ಸಲ್ಲಿಸಿದರು.ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ರವಿವಾರ ಏ.3 ರಂದು ಸಂಜೆ ಜರುಗಿದವು.

ರಾಮಪ್ಪ ಬಿ.ಕೊಳ್ಳಿಯವರು ಹುಟ್ಟೂರು ಹಿರೇಕುಂಬಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ 1992 ಮಾರ್ಚ್ 28 ರಂದು ಸೇರಿ 30 ವರ್ಷಗಳ ಕಾಲ ಸೇವೆಗೈದು ಇತ್ತೀಚೆಗೆ 2022 ರ ಮಾರ್ಚ್ 31 ರಂದು ನಿವೃತ್ತರಾದರು.

ವೀರಯೋಧರಾಗಿ ಪುಣೆ, ರಾಜಸ್ಥಾನ, ಡೆಹ್ರಾಡೂನ್, ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ 2000-2010 ರವರೆಗೆ ಆಪರೇಷನ್ ಪರಾಕ್ರಮ, ಉತ್ತರ ಕಾಶ್ಮೀರದ ಅಮರನಾಥ ಸುರಕ್ಷತಾ ಕಾರ್ಯಾಚರಣೆ, ಸೋನಾಮಾರ್ಗ ಸುರಕ್ಷತೆ ಮತ್ತಿತರ ಪ್ರಮುಖ ಸೇವೆಗಳ ಸಂದರ್ಭದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಗೈದಿದ್ದಾರೆ. ಬೆಳಗಾವಿಯ ಇನ್‍ಫಂಟ್ರಿ ಕಮಾಂಡೋ ಶಾಲೆಯಲ್ಲಿಯೂ ಕ್ಯಾಪ್ಟನ್ ಆಗಿ ಸೇವೆಗೈದಿದ್ದಾರೆ.

ಸುದೀರ್ಘ 30 ವರ್ಷಗಳ ಕಾಲ ದೇಶಸೇವೆಗೈದ ಗ್ರಾಮದ ವೀರಪುತ್ರನಿಗೆ ಹಿರೇಕುಂಬಿ ಗ್ರಾಮಸ್ಥರು ಇಂದು ಏ.3 ರಂದು ಹೆಮ್ಮೆಯಿಂದ ಸ್ವಾಗತಿಸಿ,ಗೌರವದಿಂದ ಬರಮಾಡಿಕೊಂಡರು.

ಗ್ರಾ.ಪಂ.ಅಧ್ಯಕ್ಷೆ ಫಕೀರವ್ವ ಪುಂಡಲೀಕ ಕೊಳ್ಳಿ,ಸದಸ್ಯರಾದ ಶೇಖಪ್ಪ ದೇಶನೂರ, ಗದಗಯ್ಯ ಅಮೋಘಿಮಠ,ತಾ.ಪಂ.ಮಾಜಿ ಸದಸ್ಯ ಸುರೇಶ ಹಾರೋಬೀಡಿ, ನಿವೃತ್ತ ಸೇನಾಧಿಕಾರಿ,ಶಿಕ್ಷಕ ರಮೇಶ ಪೂಜಾರಿ,ಮಾಜಿ ಸೈನಿಕರ ಸಮನ್ವಯ ಸಮಿತಿಯ ಮಲ್ಲಿಕಾರ್ಜುನ ಗಾಣ ಗೇರ ಸೇರಿದಂತೆ ಹಿರೇಕುಂಬಿ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.////

 

ಬಾಸ್ಕೇಟ್‍ಬಾಲ್: ಉಚಿತ ತರಬೇತಿ ಶಿಬಿರ

ಬೆಳಗಾವಿ ಏ.04 : ಬಾಸ್ಕೇಟ್‍ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಹಾಗೂ ವಿಕಲಚೇತನ ವ್ಹೀಲ್‍ಚೇರ್ ಬಾಸ್ಕೇಟಬಾಲ್ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಪ್ರಿಲ್ 7 ರಿಂದ ಜಿಲ್ಲಾ ಕ್ರೀಡಾಂಗಣದ ಬಾಸ್ಕೇಟಬಾಲ್ ಅಂಕಣದಲ್ಲಿ ಉಚಿತ ಬಾಸ್ಕೇಟ್‍ಬಾಲ್ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿರುತ್ತದೆ. ಜಿಲ್ಲೆಯ ಬಾಸ್ಕೇಟ್‍ಬಾಲ್ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಬಾಸ್ಕೇಟ್‍ಬಾಲ್ ತರಬೇತಿದಾರರಾದ ವಿ.ಎಸ್.ಪಾಟೀಲ ಇವರ ದೂರವಾಣ ಸಂಖ್ಯೆ 8317456301ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಮಾನವ ಹಕ್ಕುಗಳ ಸಂಸ್ಥೆ ಜನಸಾಮಾನ್ಯರ ಧ್ವನಿಯಾಗಬೇಕು : ಸತೀಶ ಜಾರಕಿಹೊಳಿ

ಬೆಳಗಾವಿ ಏ.04 : ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ, ಹಿಂದುಳಿದವರ, ನಿರ್ಗತಿಕರ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.