Belagavi News In Kannada | News Belgaum

ಅಪ್ಪು ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರು

ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ `ಜೇಮ್ಸ್’ ಚಿತ್ರವನ್ನ ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಸೆಲೆಬ್ರೇಟ್ ಮಾಡಿದ್ದಾಯ್ತು. ಈಗ ಅಪ್ಪು ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ’ ತೆರೆಗೆ ಅಬ್ಬರಿಸಲು ಸಿದ್ದವಾಗ್ತಿದೆ.

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ಮತ್ತು ಅಮೋಘ ವರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಪುನೀತ್, ಕರ್ನಾಟಕದ ಹಲವು ಜಾಗಗಳಿಗೆ ಭೇಟಿ ನೀಡಿ, ಬೆಟ್ಟ ಗುಡ್ಡ ಪರಿಸರಗಳ ಮಧ್ಯೆ ಚಿತ್ರೀಸಿರೋ ಈ ಚಿತ್ರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬದರಲು ಸಿದ್ದವಾಗಿದೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು.
ಈ ಚಿತ್ರ ನೈಜವಾಗಿ ಮೂಡಿ ಬರಬೇಕು ಎಂದು ಮೇಕಪ್ ಹಚ್ಚದೇ ಪುನೀತ್ ನಟಿಸಿರೋ ಸಿನಿಮಾವಿದು. `ಗಂಧದ ಗುಡಿ’ ಟೈಟಲ್ ಹೊತ್ತು ಕರ್ನಾಟಕದ ಮೂಲೆ ಮೂಲೆಯಲ್ಲೂ ಶೂಟ್ ಮಾಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಸಿದ್ದಪಡಿಸಿ ಹಸಿರಿನ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ನಿರ್ದೇಶಕ ಅಮೋಘ ವರ್ಷ. ಈ ಡಾಕ್ಯುಮೆಂಟರಿ ಮಾದರಿಯ ಈ ಸಿನಿಮಾ ಪಿಆರ್‌ಕೆ ಪ್ರೋಡಕ್ಷನ್ ಮೂಲಕ ಅಪ್ಪು ಕನಸಿನ ಚಿತ್ರವಾಗಿ ತೆರೆಗೆ ಬರಲಿದೆ.
ತಮ್ಮ ನೆಚ್ಚಿನ ಕಲಾವಿದ ನಟಿಸಿರೋ ಈ ಚಿತ್ರವನ್ನು ನೋಡೋದಕ್ಕೆ ಅಪ್ಪು ಫ್ಯಾನ್ಸ್ ಸಿದ್ಧರಾಗಿದ್ದಾರೆ. `ಜೇಮ್ಸ್’ ಸೂಪರ್ ಸಕ್ಸಸ್ ನಂತರ `ಗಂಧದ ಗುಡಿ’ ಮೂವಿ, ಭಿನ್ನ ಕಾನ್ಸೆಪ್ಟ್ ಆಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. `ಜೇಮ್ಸ್’ ಚಿತ್ರ ನೋಡಿ ಕಣ್ತುಂಬಿಕೊಂಡಿದ್ದ ಅಪ್ಪು ಅಭಿಮಾನಿಗಳು ಈಗ ಅಪ್ಪು ಕನಸಿನ ಸಿನಿಮಾ ನೋಡಲು ಕಾಂಟ್ ವೈಟ್ ಅನ್ನುತ್ತಿದ್ದಾರೆ.//////