Belagavi News In Kannada | News Belgaum

ಕಾರು ಪಲ್ಟಿಯಾಗಿ ತಂದೆ-ಮಗ ಸ್ಥಳದಲ್ಲೇ ಸಾವು

ಕಲಬುರಗಿ: ಕಾರು ಪಲ್ಟಿಯಾಗಿ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ನಡೆದಿದೆ.
ಸ್ವಾಮಿ ಗಾಯಕ್ವಾಡ್​(30) ಹಾಗೂ ತಂದೆ ಬಾಬು ಗಾಯಕ್ವಾಡ್​(55) ಮೃತ ದುರ್ದೈವಿಗಳು. ತಂದೆ ಮತ್ತು ಮಗ ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟ್ ನಿವಾಸಿಗಳಾಗಿದ್ದಾರೆ. ಇವರು ಆಳಂದದಿಂದ ಅಕ್ಕಲಕೋಟ್​​ಗೆ ಹೋಗುವಾಗ‌ ಅಪಘಾತ ಸಂಭವಿಸಿದೆ.
ಘಟನೆ ಹಿನ್ನೆಲೆ: ತಂದೆ ಬಾಬು ಗಾಯಕ್ವಾಡ್ ಮತ್ತು ಮಗ ಸ್ವಾಮಿ ಗಾಯಕ್ವಾಡ್ ಆಳಂದದಿಂದ ಅಕ್ಕಲಕೋಟ್​​ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ಕಾರು ಪಲ್ಟಿಯಾಗಿದೆ. ಪರಿಣಾಮ ಮಗ ಸ್ವಾಮಿ ಗಾಯಕ್ವಾಡ್ ಗೆ ಗಂಭೀರ ಗಾಯಗಾಳಾಗಿವೆ. ಇದರಿಂದ ತೀರ್ವ ರಕ್ತಸ್ರಾವವಾಗಿ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗನ ಸಾವು ಕಂಡ ತಂದೆ ಬಾಬು ಗಾಯಕ್ವಾಡ್ಕ್ಷಣ ಹೊತ್ತು ನರಳಾಡಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////