ಸರ್ಕಾರಕ್ಕೆ ಧಮ್ ಇದ್ರೆ ಉಗ್ರನನ್ನ ಬಂಧಿಸಿ ತನಿಖೆ ನಡೆಸಲಿ : ಎಂಎಲ್ಸಿ ಸಿ.ಎಂ. ಇಬ್ರಾಹಿಂ ಸವಾಲ್

ಮೈಸೂರು: ಮುಸ್ಕಾನ್ಗೂ ಆ ವಿಡಿಯೋ ಸಂಬಂಧವಿಲ್ಲ. ಸರ್ಕಾರಕ್ಕೆ ಧಮ್ ಇದ್ರೆ ಮೊಸ್ಟ್ ವಾಂಟೆಡ್ ಉಗ್ರ ಜವಾಹಿರಿಯನ್ನು ಬಂಧಿಸಲಿ ಎಂದು ಮಾಜಿ ಎಂಎಲ್ಸಿ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ʼಗೆ ಅಲ್ ಖೈದಾ ನಾಯಕ ಜವಾಹಿರಿ ಶಹಬ್ಬಾಶ್ಗಿರಿ ನೀಡಿದ್ದು, ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಇಬ್ರಾಹಿಂ, ‘ ಮುಸ್ಕಾನ್ಗೂ ಅಲ್ಖೈದಾಗೂ ಯಾವುದೇ ಸಂಬಂಧವಿಲ್ಲ. ಅಲ್ಖೈದಾ ಕರ್ನಾಟಕಕ್ಕೆ ಬಂದಿಲ್ಲ, ಬರೋಕೆ ಸಾಧ್ಯವಿಲ್ಲ. ನಮ್ಮ ಜನ ಅವ್ರನ್ನ ಬರೋದಕ್ಕೆ ಬಿಡೋದಿಲ್ಲ ಅನ್ನೋ ನಂಬಿಕೆ ನನಗಿದೆ. ಇನ್ನು ಸುಖಾಸುಮ್ಮಾನೆ ಮುಸ್ಕಾನ್ ವಿರುದ್ಧ ಆರೋಪ ಮಾಡಲಾಗ್ತಿದೆ. ಸಂಬಂಧವಿದೆ ಎಂದು ಹೇಳುವವರು ಮತ್ತು ಸರ್ಕಾರಕ್ಕೆ ತಾಕತ್ತಿದ್ರೆ, ಅವನನ್ನ ಬಂಧಿಸಿ ತನಿಖೆ ನಡೆಸಲಿ ಎಂದಿದ್ದಾರೆ.//////