Belagavi News In Kannada | News Belgaum

ವಚನಕಾರ ದೇವರ ದಾಸಿಮಯ್ಯ ಜಯಂತಿ

ಸಾರ್ಥಕ ಬದುಕಿನ ಸಾರ ವಚನ ಸಾಹಿತ್ಯದಲ್ಲಿ ಅಡಗಿದೆ: ಡಾ.ಬಸವರಾಜ ಜಗಜಂಪಿ

 

ಬೆಳಗಾವಿ, ಏಪ್ರಿಲ್ 6: ಜೀವನದ ಪ್ರತಿಯೊಂದು ಹಂತವನ್ನು ಶರಣರು ವಚನ ಸಾಹಿತ್ಯದಲ್ಲಿ ಸವಿಸ್ತಾರವಾಗಿ ಹಾಗೂ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಜೀವನದ ಸಾರ್ಥಕ ಬದುಕಿನ ಸಾರವೆಲ್ಲವೂ ವಚನಸಾಹಿತ್ಯ ದಲ್ಲಿ ಅಡಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಬಸವರಾಜ ಜಗಜಂಪಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ(ಏ.6) ವಡಗಾಂವ ಚಾವಡಿಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ನಡೆದ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ದೇವರ ದಾಸಿಮಯ್ಯರು ಕಲಬುರ್ಗಿ ಜಿಲ್ಲೆ ಮುದೇನೂರು ರಾಮಯ್ಯ ಮತ್ತು ಶಂಕರಮ್ಮ ಎಂಬ ದಂಪತಿಗಳ ಮಗನಾಗಿ ಸಾಮಾನ್ಯ ಕುಟುಂಬದಲ್ಲಿ ಜನಸಿದರು. ಅವರು ವಚನಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ.

ಶಿವನಿಗೆ ದೇಹ ವಸ್ತ್ರವನ್ನು ಕೊಟ್ಟಿರುವುದರಿಂದ ದಾಸಿಮಯ್ಯರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿದೆ. ದಾಸಿಮಯ್ಯ ಸಮುದಾಯವನ್ನು ದಾಸಿಮಾರ್ಯರು ಎಂದು ಕರೆಯುತ್ತಿದ್ದರು. ದಾಸಿಮಾರ್ಯರು ಎಂದರೆ ಹಿರಿಯ, ದೊಡ್ಡವರು ಎನ್ನುವ ಅರ್ಥದಲ್ಲಿ ದಾಸಿಮಯ್ಯರ ಸಮುದಾಯವನ್ನು ಕರೆಯುತ್ತಿದ್ದರು ಎಂದು ಹೇಳಿದರು.

ದಂಪತಿಗಳಲ್ಲಿ ಅನುಭಾವ ಮತ್ತು ಅನುಭವ ಇದ್ದರೆ ಜೀವನ ಸಂತೋಷಮಯವಾಗಿರುತ್ತದೆ ಎಂಬುದಕ್ಕೆ ದಾಸಿಮಯ್ಯ ದಂಪತಿ ಸಾಕ್ಷಿ. ಸಂಸಾರದಲ್ಲಿ ಸದ್ಗತಿ ಇದೆ ನಾನು ಅಲ್ಲ; ಎಲ್ಲ ನಿಂದೆ, ಎಲ್ಲ ನಿನೇ ಎಂದರೆ ಸಂಸಾರ ಸುಖಕರವಾಗಿರತ್ತೆ ಎನ್ನುವ ದಾಸಿಮಯ್ಯರ ವಚನಸಾರವನ್ನು ವಿವರಿಸಿದರು.

ಗಂಡಿಗೆ ಒಂದು ಗುಣವಿದ್ದರೆ ಹೆಣ ್ಣಗೆ ಆರು ಗುಣವಿದೆ ಎನ್ನತ್ತ ನಟ ಡಾ.ರಾಜಕುಮಾರ ಚಿತ್ರವನ್ನು ನೆನಪಿಸುತ್ತಾ, ಹೆಣ ್ಣ ನಲ್ಲಿ ಎಲ್ಲ ಗುಣಗಳು ಅಡಗಿವೆ. ಹೆಣ್ಣ ಸಮಯಕ್ಕೆ ತಕ್ಕಂತೆ ಗಂಡಿನ ಪ್ರಮುಖ ಹಂತದಲ್ಲಿ ತನ್ನದೇ ಯಾದ ಪಾತ್ರ ವಹಿಸುತ್ತಾಳೆ ಎನ್ನುವುದಕ್ಕೆ ದೇವರ ದಾಸಿಮಯ್ಯರ ಹೆಣ ್ಣನ ಮಹತ್ವ ಸಾರುವ ವಚನಸಾಹಿತ್ಯವನ್ನು ಡಾ.ಬಸವರಾಜ ಜಗಜಂಪಿ ಅವರು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರು ವಿದ್ಯಾವತಿ ಭಜಂತ್ರಿ ನಿರೂಪಣೆ ಮಾಡಿದರು. ಮಹಾನಗರ ಪಾಲಿಕೆಯ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಅವರು ಕಾರ್ಯಕ್ರಮದ ವಂದಿಸಿದರು. ಸತ್ಯನಾರಾಯಣ ಭಟ್ ಅವರ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಭಾವಚಿತ್ರ ಮೆರವಣ ಗೆ

ಇದಕ್ಕೂ ಮುಂಚೆ ಖಾಸಭಾಗ ಶ್ರೀ ಬಸವೇಶ್ವರ ವೃತ್ತದಿಂದ ದೇವರ ದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ಹಲವು ಕಲಾ ತಂಡಗಳಿಂದ ಭವ್ಯ ಮೆರವಣ ಗೆ ನಡೆಯಿತು.

ಅಲ್ಲಿಂದ ಆರಂಭಗೊಂಡ ಮೆರವಣ ಗೆಯು ಪ್ರಮುಖ ಬೀಡಿದಗಳ ಮೂಲಕ ಬೆಳಗಾವಿಯ ವಡಗಾವಿ ಚಾವಡಿಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ದೇವರ ದಾಸಿಮಯ್ಯ ಅವರ ಜಯಂತಿಯ ವೇದಿಕೆ ಕಾರ್ಯಕ್ರಮ ನಡೆಯಿತು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಸದಸ್ಯರುಗಳಾದ ದೀಪಾಲಿ ಸಂತೋಷ ಟೋಪಗಿ, ರೇμÁ್ಮ ಬಸವರಾಜ ಕಾಮಕಾರ, ಪ್ರೀತಿ ವಿನಾಯಕ ಕಾಮಕಾರ, ಸಮಾಜದ ಮುಖಂಡರು ವೆಂಕಟೇಶ ವನಹಳ್ಳಿ, ಪರಶುರಾಮ್ ಢಗೆ, ನಾರಾಯಣ ಕುಲಗೋಡ, ಅಶೋಕ ಹಣಬರಟ್ಟಿ, ಗುರುಸಿದ್ದಪ್ಪ ತಿಗಡಿ, ಮಾರುತಿ ಬಂಗೋಡಿ, ಬಸವರಾಜ ಜಡಫನ್ನವರ ಮತ್ತಿತರರು ಉಪಸ್ಥಿತರಿದ್ದರು.