Belagavi News In Kannada | News Belgaum

ಮದ್ಯ ಪ್ರೀಯರಿಗೆ ಶಾಕ್ : ಬಿಯರ್ ಬೆಲೆ ಹೆಚ್ಚಳ

ರಾಜ್ಯ ಬೆಲೆ ಏರಿಕೆ (Price Hike) ಬಿಸಿ ಮುಂದುವರಿದೆ. ಪೆಟ್ರೋಲ್ (Petrol)​, ಡೀಸೆಲ್​ ಗಗನಕ್ಕೇರಿದ್ದಾಯ್ತು, ವಿದ್ಯುತ್​ ಬೆಲೆಯೂ ಹೆಚ್ಚಳವಾಯ್ತು ಇದೀಗ ಎಣ್ಣೆ ಪ್ರಿಯರಿಗೆ ಕಿಕ್​ ಇಳಿಸೋ ಸುದ್ದಿ ಹೊರಬಿದ್ದಿದೆ. ಮದ್ಯಪಾನ (Alcohol) ಕುಡಿದ್ರೆ ಕಿಕ್​ ಏರುತ್ತಿತ್ತು, ಆದ್ರೆ ಇನ್ಮುಂದೆ ರೇಟ್​ ಕೇಳಿದ್ರೆ ಇಳಿಯುತ್ತೆ ಕಿಕ್​ (Kick), ಇದೀಗ ಮದ್ಯಪಾನದ ಬೆಲೆ ಏರಿಕೆ ಕುರಿತು ಮದ್ಯಪಾನ ಕಂಪನಿಗಳು (Company) ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಸಹ ಪಡೆದಿದೆ.

ಬಜೆಟ್​ನಲ್ಲಿ ಮಧ್ಯಪಾನದ ಮೇಲಿನ ಯಾವುದೇ ತೆರಿಗೆ ಬಗ್ಗೆ ಪ್ರಸ್ತಾಪ ಮಾಡದಿದ್ರೂ ಬಿಯರ್​ ಬೆಲೆ ಏರಿಕೆ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಬ್ರಾಂಡ್​ಗಳ ಬಿಯರ್​ ಬೆಲೆ ಹೆಚ್ಚಾಗಲಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ

ಬಾರ್ಲಿ ಸೇರಿದಂತೆ ಬಿಯರ್‌ ಉತ್ಪಾದನೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಡೀಸೆಲ್‌ ಮತ್ತು ಪೆಟ್ರೋಲ್‌ ದರ ಹೆಚ್ಚಳದಿಂದ ಸಾಗಣೆ ದರ ಹೆಚ್ಚಳವಾಗಿರುವುದರಿಂದ ಬಿಯರ್‌ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬುದು ಕಂಪನಿಗಳ ಹೇಳಿಕೆ. ಈಗಾಗಲೇ ಬಹುತೇಕ ಎಲ್ಲ ಬಿಯರ್‌ ಕಂಪನಿಗಳು ಪ್ರತಿ ಬಾಟಲ್‌ಗೆ 5 ರಿಂದ 10 ರೂ. ಏರಿಸುವ ಪ್ರಸ್ತಾಪವನ್ನು ನಿಯಮದಂತೆ ಅಬಕಾರಿ ಇಲಾಖೆಗೆ ಸಲ್ಲಿಸಿ, ಅನುಮತಿ ಪಡೆದುಕೊಂಡಿವೆ

ಎಲ್ಲಾ ಬ್ರಾಂಡ್​ ಬಿಯರ್​ ಬೆಲೆ ಏರಿಕೆ

ಬಹುತೇಕ ಏ. 15ರಿಂದ ಎಲ್ಲ ಬ್ರಾಂಡ್‌ ಬಿಯರ್‌ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ,” ಎಂದು ಮೂಲಗಳು ಖಚಿತಪಡಿಸಿವೆ. ಕಿಂಗ್‌ ಫಿಷರ್‌, ಬಡ್‌ ವೈಸರ್‌, ಟುಬೊರ್ಗ್‌ ಸೇರಿದಂತೆ ಎಲ್ಲಾ ಬಗೆಯ ಬಿಯರ್‌ ದರ ಹೆಚ್ಚಳವಾಗಲಿದೆ. ಇನ್ಮುಂದೆ ಮದ್ಯಪ್ರಿಯರು ಬಿಯರ್ ಕುಡಿಯಲೂ ಹೆಚ್ಚು ಹಣ ಕೊಡಲೇಬೇಕಿದೆ.

ಸಾಗಣೆ ಖರ್ಚು ಹೆಚ್ಚಳ

ಬಿಯರ್‌ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ಬಾರ್ಲಿ ರಷ್ಯಾ ಮತ್ತು ಉಕ್ರೇನ್‌ನಿಂದ ಆಮದಾಗುತ್ತಿತ್ತು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಪೂರೈಕೆಯಾದರೂ ದುಬಾರಿ ಬೆಲೆ ತೆರಬೇಕಾಗಿದೆ. ಎರಡನೇಯದಾಗಿ, ಇತರೆ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಮೂರನೇಯದಾಗಿ ಪೆಟ್ರೋಲ್‌, ವಿದ್ಯುತ್‌ ಬೆಲೆ ಏರಿಕೆಯಿಂದ ಸಾಗಣೆ ದರ ಅಧಿಕವಾಗಿದೆ. ನಾಲ್ಕನೆಯದಾಗಿ, ಕಳೆದ ಮೂರು ವರ್ಷಗಳಿಂದ ಕೋವಿಡ್‌ನಿಂದಾಗಿರುವ ಭಾರಿ ನಷ್ಟದ ಪ್ರಮಾಣದಲ್ಲಿ ಸ್ವಲ್ಪವಾದರೂ ಭರ್ತಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ