Belagavi News In Kannada | News Belgaum

ವಿಧಾನಸೌಧದಲ್ಲೇ ಶಾಸಕರ ಪಾಸ್ ಹೊಂದಿದ್ದ ಕಾರಿಗೆ ನೋಟೀಸ್ ನೀಡಿದ ಆರ್‌ ಟಿಓ ಅಧಿಕಾರಿಗಳು

ಬೆಂಗಳೂರು: ಶಾಸಕರೊಬ್ಬರು ತಮ್ಮ ಕಾರಿಗೆ ಶಾಸಕ ಎಂಬುದಾಗಿ ದೊಡ್ಡ ಬೋರ್ಡ್ ಅನ್ನು ನೋಂದಣಿ ಫಲಕದ ಮೇಲೆ ಹಾಕಿ, ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್ ಎನ್ನುವಂತೆ ಓಡಾಡುತ್ತಿದ್ದರು. ಇದೀಗ ಅವರಿಗೆ ಆರ್ ಟಿಓ ಅಧಿಕಾರಿಗಳು ನೋಟಿಸ್ ನೀಡಿ, ಬಿಗ್ ಶಾಕ್ ನೀಡಿದ್ದಾರೆ.
ಹೌದು.. ವಿಧಾನಸೌಧದಲ್ಲೇ ಶಾಸಕರ ಪಾಸ್ ಹೊಂದಿದ್ದ ಕಾರಿಗೆ ಆರ್ ಟಿ ಓ ಅಧಿಕಾರಿಗಳು ನೋಟೀಸ್ ನೀಡಿ ಬಿಗ್ ಶಾಕ್ ನೀಡಿದ್ದಾರೆ. ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ದೊಡ್ಡದಾಗಿ ಬರಹ ಹಾಕಲಾಗಿತ್ತು. ಹೀಗೆ ನೋಂದಣಿ ಫಲಕ ಹಾಕಿದ್ದಂತ ಶಾಸಕರ ಕಾರ್ ಅನ್ನು, ಆರ್‌ ಟಿಓ ಅಧಿಕಾರಿಗಳಿಂದ ವಿಧಾನಸೌಧದ ಆವರಣದೊಳಗೆ ಚೇಸ್ ಮಾಡಿಕೊಂಡು ಬಂದು ನೊಟೀಸ್ ನೀಡಿದ್ದಾರೆ.
ಅಂದಹಾಗೇ, ಆರ್ ಟಿ ಓ ಅಧಿಕಾರಿಗಳು ಶಾಸಕರ ಕಾರಿಗೆ ನೀಡಿರುವಂತ ನೋಟಿಸ್ ನಲ್ಲಿ ನಂಬರ್ ಫ್ಲೇಟ್ ಡಿಫೆಕ್ಟ್ ಎಂಬುದಾಗಿ ನಮೂದಿಸಲಾಗಿದೆ. ಈ ಕಾರು ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣ ರೆಡ್ಡಿ ಹೆಸರಿನಲ್ಲಿ ಓಡಾಡುತ್ತಿದ್ದಂತ ಇನ್ನೋವಾ ಕಾರು ಎಂದು ತಿಳಿದು ಬಂದಿದೆ. ಈ ಕಾರಿನ ನಂಬರ್ ಪ್ಲೇಟ್ ಮೇಲೆ ಹೆಸರು ಹಾಕಿದ್ದರಿಂದಾಗಿ ಆರ್ ಟಿ ಓ ಇನ್ಸ್ ಪೆಕ್ಟರ್ ವಿನಯ ಚೌಧರಿಯವರು, ನೋಟಿಸ್ ನೀಡಿ ಈಗ ಶಾಕ್ ನೀಡಿದ್ದಾರೆ.//////