Belagavi News In Kannada | News Belgaum

ಮಹಿಳೆಯರ ಕಳ್ಳ ಸಾಗಾಣೆ ಬಹುದೊಡ್ಡ ಜಾಲ ಬೇಧಿಸಿದ ಸಿಸಿಬಿ

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಸದ್ದು ಮಾಡಿದ್ದಂತ ಮಾನವ ಕಳ್ಳಸಾಗಾಣಿಕೆ ಬಹುದೊಡ್ಡ ಜಾಲವೊಂದನ್ನು ಕೊನೆಗೂ ಸಿಸಿಬಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಜೊತೆಗೆ ಅಂತರರಾಜ್ಯ ದಂಧೆಕೋರರು ಟಾರ್ಗೆಟ್ ಮಾಡುತ್ತಿದ್ದದ್ದು ಯಾರನ್ನು ಎನ್ನುವ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಸಿಸಿಬಿ ಪೊಲೀಸರು ಅಂತರಾಜ್ಯ ದಂಧೆಯನ್ನು ಬೇಧಿಸಿದ್ದು, ಈ ಸಂಬಂಧ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ರಾಜ್ಯದ ಜೂನಿಯರ್ ಆರ್ಟಿಸ್ಟ್, ಡ್ಯಾನ್ಸರ್ ಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ಪುಸಲಾಯಿಸಿ, ಕರೆದೊಯ್ದು ಅಲ್ಲಿನ ಡ್ಯಾನ್ಸ್ ಬಾರ್ ಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ದೂಡುತ್ತಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ.
ಅಂದಹಾಗೇ ಬಂಧಿತ ಆರೋಪಿಗಳನ್ನು ಕೊಪ್ಪಳ ತಾಲೂಕಿನ ಬಸವರಾಜು ಶಂಕರಪ್ಪ ಕಳಸದ್, ಮೈಸೂರಿನ ನಜರ್ ಬಾದ್ ನ ಆದರ್ಶ್, ತಮಿಳುನಾಡಿನ ಸೇಲಂನ ರಾಜೇಂದ್ರ ನಾಚಿಮುತ್ತು, ಚೆನ್ನೈನ ನಾರಿಯಪ್ಪನ್, ಬೆಂಗಳೂರಿನ ಜೆಪಿ ನಗರದ ಚಂದು ಆರ್, ಪಾಂಡಿಚೇರಿಯ ಟಿ.ಅಶೋಕ್ ಹಾಗೂ ತಿರುವಳ್ಳೂರ್ ನ ಎಸ್ ರಾಜೀವ್ ಗಾಂಧಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳೆಲ್ಲರೂ ಜೂನಿಯರ್ ಆರ್ಟಿಸ್ಟ್, ಡ್ಯಾನ್ಸರ್, ಇವೆಂಟ್ ಮ್ಯಾನೇಜ್ಮೆಂಟ್ ಗಳಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಪರಿಚಿತರಾಗುವಂತ ಮಹಿಳೆಯರನ್ನು ಟಾರ್ಗೆಟ್ ಮಾಡಿ, ದುಬೈಗೆ ಕಳ್ಳಸಾಗಾಣಿಕೆ ಮಾಡಿ, ಅನೈತಿಕ ಚಟುವಟಿಕೆಗಳಿಗೆ ದೂಡುತ್ತಿದ್ದಂತ ಮಾಹಿತಿಯನ್ನು ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.//////