Belagavi News In Kannada | News Belgaum

ಸಾಹಿತ್ಯ ಕೃತಿಗೆ 2020ನೇ ಸಾಲಿನಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ


ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಎಸ್.ಬಿ.ಬಸೆಟ್ಟಿ ಅವರು ರಚಿಸಿದ ಮೊದಲ ಸ್ವತಂತ್ರ ಕೃತಿಯಾದ ‘ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ ಎಂಬ ಸಾಹಿತ್ಯ ಕೃತಿಗೆ 2020ನೇ ಸಾಲಿನಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಪುರಸ್ಕಾರದ ಫಲಕ ಹೊಂದಿದೆ. ಡಾ. ಎಸ್. ಬಿ ಬಸೆಟ್ಟಿ ಅವರ ಮೂಲತಹ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪ ಗ್ರಾಮದವರಾಗಿದ್ದು, ಕಳೆದ 15 ವರ್ಷಗಳಿಂದ ಬೋಧನೆ, ಸಂಶೋಧನೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೆಳನ, ಚರ್ಚೆ, ಗೋಷ್ಠಿ ಭಾಗವಹಿಸಿದ್ದಾರೆ. ಇವರು ವಿವಿಧ ವಿಷಯಗಳ ಕುರಿತು ಶೈಕ್ಷಣ ಕವಾಗಿ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಲೇಗಳನಗಳನ್ನು ಪ್ರಕಟಿಸಿದ್ದು, ಡಾ. ಎಸ್.ಬಿ.ಬಸೆಟ್ಟಿ ಅವರು ‘ಲೋಕಮಾನ್ಯ ಬಾಲಗಂಗಾಧರ ತಿಲಕರ ಸ್ವರಾಜ್ಯ ಕಲ್ಪನೆ’, ‘ಲೋಕಮಾನ್ಯ ಬಾಲಗಂಗಾಧರ ತಿಲಕರ ದೃಷ್ಟಿಯಲ್ಲಿ ಸ್ವರಾಜ್ಯ ಕಲ್ಪನೆ’, ಮತ್ತು 2020ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ’,ಕೃತಿಗಳನ್ನು ರಚಿಸಿದ್ದು, ಹಲವಾರು ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಡಾ. ಎಸ್.ಬಿ.ಬಸೆಟ್ಟಿ ಅವರು ಕವಿವಿಯಿಂದ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದು, 2005ರಲ್ಲಿ ‘ಲೋಕಮಾನ್ಯ ಬಾಲಗಂಗಾಧರ ತಿಲಕರ ರಾಜಕೀಯ ತತ್ವಗಳು-ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಸಲ್ಲಿಸದ ಸಂಶೋಧನಾ ಪ್ರಭಂದಕ್ಕೆ ಕವಿವಿ ಡಾಕ್ಟರೇಟ್ ನೀಡಿದೆ.