ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಏ. 21ರಂದು ಬೃಹತ್ ರೈತ ಸಮಾವೇಶ: ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ

ಬೆಳಗಾವಿ: ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಇವುಗಳನ್ನು ವಾಪಾಸ್ ಪಡೆಯಬೇಕೆಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಬೆಳಗಾವಿಯ ಸಾಹಿತ್ಯ ಭವನದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 21ರಂದು ಬಸವಣಗುಡಿ ನ್ಯಾಷನಲ್ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ. ಇದರ ಪ್ರಮುಖ ಉದ್ದೇಶ ಭಾರತ ಸರ್ಕಾರ ತಂದಂತಹ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆಬೇಕು.
ಕರ್ನಾಟಕದಲ್ಲಿ ಆ ಕಾಯ್ದೆಗಳನ್ನು ತಳಮಟ್ಟದಲ್ಲಿ ಸುಧಾರಣೆ ಮಾಡಲು ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಾಗಿದೆ. ಇದನ್ನು ವಾಪಾಸ್ ಪಡೆಯಬೇಕೆಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಕೃಷಿ ಕಾಯ್ದೆಯನ್ನು ಆದಷ್ಟು ಬೇಗನೆ ವಾಪಾಸ್ ಪಡೆಯದಿದ್ದರೆ ಸಮಾವೇಶದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನ ಸಂದರ್ಭದಲ್ಲಿ ಇಡೀ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆಯ ಕಾಯ್ದೆಯ ತಿದ್ದುಪಡಿ ಅಪಾಯ ಯಾವ ರೀತಿ ಆಗುತ್ತದೆ ಎಂಬ ವಿಷಯ ಈಗಾಗಲೇ ತಿಳಿಸಲಾಗಿದೆ. ಕೃಷಿ ಮಾರುಕಟ್ಟೆಯು ಸುಮಾರು 90ರಷ್ಟು ಕಳೆದುಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲಾಗಿದೆ.
ಆದರೂ ಕೂಡ ಸರ್ಕಾರದ ಚಟುವಟಿಕೆಗಳು ಇದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದು, ನಾಗರಿಕರಾದ ನಾವು ಹೇಗೆ ಸುಮ್ಮನೆ ಇರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.//////