Belagavi News In Kannada | News Belgaum

ಕಾರಾಗೃಹ ಮಹಿಳಾ ನಿವಾಸಿಗಳಿಗಾಗಿ ಬ್ಯಾಗ ಮತ್ತು ಪರ್ಸ ತಯಾರಿಕೆ ತರಬೇತಿ ಆಯೋಜನೆ

ಕಾರಾಗೃಹ ಮಹಿಳಾ ನಿವಾಸಿಗಳಿಗಾಗಿ
ಬ್ಯಾಗ ಮತ್ತು ಪರ್ಸ ತಯಾರಿಕೆ ತರಬೇತಿ ಆಯೋಜನೆ

ದಿನಾಂಕ: 07/04/2022 ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಮುಖ್ಯ ಅಧಿüಕ್ಷಕರಾದ ಶ್ರೀ ಕೃಷ್ಣಕುಮಾರ ಇವರ ಮಾರ್ಗದರ್ಶನದಲ್ಲಿ ಮಹಿಳಾ ನಿವಾಸಿಗಳಿಗಾಗಿ “ಬ್ಯಾಗ ಮತ್ತು ಪರ್ಸ ತಯಾರಿಕೆ” ಕುರಿತು ತರಬೇತಿ ಆಯೋಜಿಸಲಾಗಿತ್ತು, ಸದರಿ ತರಬೇತಿಯು ಜ್ಞಾನ ಜ್ಯೋತಿ ಗ್ರಾಮಿಣ ಕೌಶಲ್ಯ ಅಭಿವೃದ್ದಿ ಸಂಸ್ಥೆ ಶಾಹಾಪೂರ ಬೆÉಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದು. ಕಾರ್ಯಕ್ರಮಕ್ಕೆ ಮುಖ್ಯ ಅತಥಿüಗಳಾಗಿ ಶ್ರೀ ಮುತಾಲಿಕ ದೇಸಾಯಿ, ನಿವೃತ್ತ ಅಕೌಂಟ್ಸ ಅಧಿಕಾರಿ ನೆಹರು ಯುವ ಕೇಂದ್ರ ಬೆಳಗಾವಿ, ಶ್ರೀಮತಿ ವಿಜಯಾ ಹಿರೇಮಠ, ಶ್ರೀಮತಿ ಸುವರ್ಣ ಪಾಟೀಲ, ಶ್ರೀಮತಿ ವಿಜಯಾ ನೇಸರಗಿ, ಆಗಮಿಸಿದ್ದರು. ಅದ್ಯಕ್ಷತೆಯನ್ನು ಸಹಾಯಕ ಅಧೀಕ್ಷಕರಾದ ಶ್ರೀ ಶಹಾಬುದ್ದೀನ್ ಕೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಮುತಾಲಿಕ ದೇಸಾಯಿ ಮಾತನಾಡಿ ಜೀವನದಲ್ಲಿ ತಾವೆಲ್ಲ ತಿಳಿದೋ ಅಥವಾ ತಿಳಿಯದೇ ತಪ್ಪು ಮಾಡಿರಬಹುದು ಗತಿಸಿಹೋದ ಭೂತಕಾಲದ ಬಗ್ಗೆ ಚಿಂತಿಸದೆ ಭಾವಿ ಜೀವನದತ್ತ ಗಮನಹರಿಸಬೇಕು ಜೀವನದಲ್ಲಿ ತಾವು ಪಡೆದ ತರಬೇತಿಗಳು ಮುಂದೋಂದು ದಿನ ಉಪಯೋಗಕ್ಕೆ ಬರುತ್ತವೆ. ಕಾರಾಗೃಹದ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳÀಬೇಕು ಅಧಿಕಾರಿಗಳು ತಮಗಾಗಿ ಏರ್ಪಡಿಸಲಾಗುವ ವಿವಿಧ ತರಬೇತಿಗಳಲ್ಲಿ ಭಾಗವಹಿಸಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ತಾವೆಲ್ಲ ಬಿಡುಗಡೆ ಹೊಂದಿದ ನಂತರ ಸಮಾಜದಲ್ಲಿ ಸ್ವಾಬಲಂಬಿ ಜೀವನ ನಡೆಸಲು ಇಂತಹ ತರಬೇತಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಶ್ರೀ ಶಹಾಬುದ್ದಿನ್ ಕೆ. ಮಾತನಾಡಿ, ನಿವಾಸಿಗಳ ಮನ: ಪರಿವರ್ತನೆ ಪುನರ್ವಸತಿ ಹಾಗೂ ಸಮಾಜದಲ್ಲಿ ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುವಂತೆÉ, ಕಾರಾಗೃಹ ಇಲಾಖೆಯ ವಿವಿಧ ಯೋಜನೆಗಳನ್ನು ರೂಪಿಸಿದ್ದು ಅದರಲ್ಲೇ ಕೌಶಲ್ಯ ಅಭಿವೃದ್ದಿ ತರಬೇತಿಯು ಒಂದು ಇಂದಿನ ಆಧುನಿಕ ಯುಗದಲ್ಲಿ ಬ್ಯಾಗ ಮತ್ತು ಪರ್ಸ ತಯಾರಿಗಕೆಯ ಉದ್ಯಮವು ಆರ್ಥಿಕವಾಗಿ ಸಬಲರಾಗಲು ಅತ್ಯುತ್ತಮ ಮಾರ್ಗವಾಗಿದೆ, ಇಂತಹ ತರಬೇತಿಗಳು ನಿವಾಸಿಗಳಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸುತ್ತವೆ ಹಾಗೂ ಭಾವಿ ಜೀವನಕ್ಕೆ ದಾರಿದೀಪವಾಗುತ್ತವೆ. ಜ್ಞಾನ ಎಂದರೆ ಕತ್ತಲಿನಿಂದ ಬೆಳಕಿನಡೆಗೆ ಕರೆದೊಯ್ಯುವ ದೀಪವಿದ್ದಂತೆ ಕಾರಣ ಕಾರಾಗೃಹದ ಸಮಯವನ್ನು ಸದುಪಯೋಗ ಪಡಿಸಿಕೊಂದು ಇಂತಹ ತರಬೇತಿಗಳಲ್ಲಿ ಭಾಗವಹಿಸಬೇಕು, ಜ್ಞಾನ ಜ್ಯೋತಿ ಸಂಸ್ಥೆಯು ಮಹಿಳಾ ನಿವಾಸಿಗಳಿಗಾಗಿ ಉಚಿತವಾಗಿ ಈ ತರಬೇತಿಯನ್ನು ಆಯೋಜಿಸಿದ್ದು ಸುತ್ಯಾರ್ಹ ಎಂದು ಹೇಳಿದರು.
ಶ್ರೀಮತಿ ವಿಜಯಾ ನೇಸರ್ಗಿ ಮಾತನಾಡಿ ಜ್ಞಾನ ಜ್ಯೊತಿ ಸಂಸ್ಥೆಯ ಉದ್ದೇಶ ತಿಳಿಸಿದರು ಹಾಗೂ ಮಹಿಳಾ ನಿವಾಸಿಗಳಿಗಳಿಗಾಗಿ ಯಾವುದೇ ಫಲಾಪೇಕ್ಷ ಇಲ್ಲದೆ ತರಬೇತಿಯನ್ನು ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆಯುವಂತಾಗಲಿ ಎಂದು ಹೇಳಿದರು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ತರಬೇತಿಗಳನ್ನು ನಮ್ಮ ಸಂಸ್ಥೆ ವತಿಯಿಂದ ಅಯೋಜಿಸಲಾಗುವುದು ತಾವು ಕಾರಾಗೃಹದಲ್ಲಿ ತಯಾರಿಸಿದ ಉತ್ಪನಗಳಿಗೆ ಮಾರಾಟ ಮಾಡುವ ಕುರಿತು ಅಧಿಕಾರಿಗಳಲ್ಲಿ ವಿನಂತಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈಲರ್‍ಗಳಖಾದ ಶ್ರೀ ಅಭಿಷೇಕ, ಶ್ರೀ ಬಸವರಾಜ ಭಜಂತ್ರಿ ಸಹಾಯಕ ಜೈಲರ್ ಶ್ರೀಮತಿ ಅನುಸುಯಾ ಪಾಟೀಲ ಹಾಗೂ ತಬೇತಿಯ ಬೋಧಕರಾದ ಕುಮರಿ ಪ್ರಿಯಾಂಕಾ ಹಿರೇಕರ ಹಾಗೂ ಕುಮಾರಿ ಪೂಜಾ ಕೇಳವೆಕರ ಉಪಸ್ಥಿತರಿದ್ದರು.
ಮಹಿಳಾ ನಿವಾಸಿಗಳಾದ ಶ್ರೀಮತಿ ಪ್ರಜಾವತಿ ಪೂಜೇರ ಹಾಗೂ ತಿಗಡಿ ಪಾರ್ಥಿಸಿದರು ಶ್ರೀ ಉಪಾದ್ಯಾಯರಾದ ಶ್ರೀ ಶಶಿಕಾಂತ ಯಾದಗುಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.