Belagavi News In Kannada | News Belgaum

ಸಿಎಂ ಬೊಮ್ಮಾಯಿ ಕೆಳಗಿಳಿಸುವ ತಾಕತ್ತು ನನಗಿದೆ: ಶಾಸಕ ಯತ್ನಾಳ್

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೆಳಗಿಳಿಸುವ ತಾಕತ್ತು ನನಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಇಂಚಗೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಹಕ್ಕು ಒತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಸಿಎಂ ಅವರು ಕೊಡಲೇ ಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಯನ್ನೇ ಕೆಳಗಿಳಿಸುವಷ್ಟು ತಾಕತ್ತು ನನಗಿದೆ. ನಮ್ಮ ಸಮಾಜದ ವಿರುದ್ಧ ಉಲ್ಟಾಹೊಡೆದರೆ ಮುಗೀತು. ಈ ಬಗ್ಗೆ ಬೊಮ್ಮಾಯಿಗೆ ಅಂಜಿಕೆ ಇದೆ. ಈ ಮನುಷ್ಯನನ್ನು ಸುಮ್ಮನೆ ಕೂರಿಸಿದರೆ ಆರಾಮಾಗಿ ಇನ್ನೊಂದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಅಂತಾರೆ. ಅದಕ್ಕೆ ಬೊಮ್ಮಾಯಿ ಪಾಪ ಎಲ್ಲಾ ಶಾಸಕರಿಗಿಂತ ನನಗೆ ಎರಡು ಮೂರು ಕೋಟಿ ಅನುದಾನ ಹೆಚ್ಚಿಗೆ ಕೊಡುತ್ತಾರೆ ಎಂದು ಹೇಳಿದ್ದಾರೆ.//////