Belagavi News In Kannada | News Belgaum

ಎ. 12, 13 ರಂದು ಬೆಳಗಾವಿ ಜಿಲ್ಲಾ ಪುರುಷ-ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್‌ ಆಯೋಜನೆ : ಯುವ ಕಾಂಗ್ರೆಸ್‌ ನಾಯಕ

ಬೆಳಗಾವಿ: ತಾಲೂಕಿನ ಮುಚ್ಚಂಡಿ ಗ್ರಾಮದ ಎನ್.ಎಸ್.‌ಎಫ್‌ ಶ್ರೀ ಸಿದ್ದಾರೂಢ ಪ್ರೌಢಶಾಲೆಯಲ್ಲಿ ಎಪ್ರಿಲ್‌ 12, 13 ರಂದು ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲಾ ಪುರುಷ ಹಾಗೂ ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್‌ ನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷ, ಯುವ ಕಾಂಗ್ರೆಸ್‌ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ನಗರದ ಜಾಧವ ನಗರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಹಾಗೂ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಗೋಕಾಕ ಪ್ರಾಯೋಜಕತ್ವದಲ್ಲಿ ಬೆಳಗಾವಿ ಜಿಲ್ಲಾ ಪುರುಷ ಹಾಗೂ ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್‌ 2022 ನ್ನು ಹಮ್ಮಿಕೊಳ್ಳಾಗಿದೆ ಎಂದು ತಿಳಿಸಿದರು.

ಈಗಾಗಲೇ 65 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಕ್ರೀಡಾ ಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದ್ದು, 3,500 ಜನ ಪಂದ್ಯಾವಳಿ ವಿಕ್ಷೀಸಲು ಸ್ಯಾಂಡ್‌ ನಿರ್ಮಿಸಲಾಗಿದೆ. ಪ್ರಥಮ ಬಹುಮಾನ 30,000, ಎರಡನೇ ಬಹುಮಾನ 20,000, ತೃತೀಯ ಬಹುಮಾನ 10,000 ಸಾವಿರ ರೂ. ಇಡಲಾಗಿದೆ ಎಂದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಚ್ಚಂಡಿ ಗ್ರಾಪಂ ಅಧ್ಯಕ್ಷೆ ಅನೀತಾ ಸಿ. ವಡೇಯರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ್‌, ಅಂಜಲಿ ನಿಂಬಾಳ್ಕರ್‌, ಶಾಸಕರಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ್‌, ಎ.ಬಿ.ಪಾಟೀಲ್‌, ಮಾಜಿ ಶಾಸಕರಾದ ಅಶೋಕ ಪಟ್ಟಣ, ಶ್ಯಾಮ ಘಾಟಗೆ, ಭರಮಗೌಡ (ರಾಜು)ಕಾಗೆ, ರಮೇಶ ಕುಡಚಿ, ಕಾಂಗ್ರೆಸ್‌ ಮುಖಂಡರಾದ ವಿಶ್ವಾಸ ವೈದ್ಯ, ಮಹಾವೀರ ಮೋಹಿತೆ, ಮಹೇಶ ತಮ್ಮಣ್ಣವರ್‌, ಗಜಾನನ ಮಂಗಸೂಳಿ, ಪಂಚನಗೌಡ ದ್ಯಾಮನಗೌಡರ, ಅಶೋಕ ಪೂಜಾರಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಉಪ ನಿರ್ದೇಶಕರಾದ ಬಸವರಾಜ ಮಿಲ್ಲಾನಟ್ಟಿ, ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಬೆಳಗಾವಿ ಸಂಸ್ಥಾಪಕ ಕಾರ್ಯದರ್ಶಿಗಳಾದ ಬಾಳೇಶ ಬರಗಾಲಿ, ಬಾಗಲಕೋಟೆ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷರಾದ ನಂದಕುಮಾರ ಪಾಟೀಲ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷ, ಯುವ ಕಾಂಗ್ರೆಸ್‌ ನಾಯಕ ರಾಹುಲ್‌ ಜಾರಕಿಹೊಳಿ, ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಬರಗಾಲಿ ಹಾಗೂ  ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ಪದಾಧಿಕಾರಿಗಳು ಸ್ವಾಗತ ಬಯಸುವರು.

ಎಪ್ರಿಲ್‌ 13 ರಂದು ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯವ ನಾಯಕ ರಾಹುಲ್‌ ಜಾರಕಿಹೊಳಿ ಅವರು ವಹಿಸುವವರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂಕ ನಾಯಕ, ಬೆಳಗಾವಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಗೌರವಾಧ್ಯಕ್ಷ ವಿಶ್ವನಾಥ ಐ. ಪಾಟೀಲ್‌, ಮುಚ್ಚಂಡಿ ಗ್ರಾಪಂ ಅಧ್ಯಕ್ಷ ಅನೀತಾ ಸಿ. ವಡೇಯರ, ಜಿಪಂ ಮಾಜಿ ಸದಸ್ಯೆ ಫಕೀರವ್ವಾ ಹಂಚಿನಮನಿ,  ಜಿಪಂ ಮಾಜಿ ಸದಸ್ಯರಾದ ಅರುಣ ಕಟಾಂಬಳೆ, ಮಲ್ಲವ್ವಾ ಬುಡ್ರಿ, ಸಿದ್ದು ಸುಣಗಾರ, ಮನಿಷಾ ರ.ಪಾಟೀಲ್‌, ಮಂಜುನಾಥ ಪಾಟೀಲ್‌, ಮಹಾಂತೇಶ ಮಗದುಮ್ಮ, ತಾಪಂ ಮಾಜಿ ಸದಸ್ಯ ರಾಜು ಬಾಬು ಗಾವಡೆ, ಬಸವರಾಜ ಗುಜನಾಳ, ಭೀಮಪ್ಪ ಮಳಗಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದಾರೆ./////