Belagavi News In Kannada | News Belgaum

ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಲೇಬರ್ ಕಾರ್ಡ್ ಕ್ಯಾನ್ಸಲ್ ಕಾರ್ಮಿಕರ ಪ್ರತಿಭಟನೆ

ಬೆಳಗಾವಿ: ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಲೇಬರ್ ಕಾರ್ಡ್‍ಗಳನ್ನು ಕೇಂದ್ರ ಸರಕಾರ ಕ್ಯಾನ್ಸ್‍ಲ್ ಮಾಡುವ ಮೂಲಕ ಬಡವರ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಮಜದೂರ್ ನವ ನಿರ್ಮಾಣ ಸಂಘದ ಸದಸ್ಯರು ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಬೆಳಗಾವಿ ನಗರದಲ್ಲಿ ಹುಕ್ಕೇರಿ ತಾಲೂಕಿನ ಜಾರಕಿಹೊಳಿ ಗ್ರಾಮದ ಮಜದೂರ್ ನವ ನಿರ್ಮಾಣ ಸಂಘದ ಸದಸ್ಯರು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಲೇಬರ್ ಕಾರ್ಡ್‍ಗಳನ್ನು ಕೇಂದ್ರ ಸರಕಾರ ಕ್ಯಾನ್ಸ್‍ಲ್ ಮಾಡುವ ಮೂಲಕ ಬಡವರ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದರು. ನಗರದ ಅಂಬೇಡ್ಕರ್ ಗಾರ್ಡ್‍ನ್‍ನಿಂದ ಜಿಲ್ಲಾಧಿಕಾರಿಗಳ ಕಚರಿಯ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.ಬೆಳಗಾವಿಯಲ್ಲಿ ಮಜದೂರ್ ನವ ನಿರ್ಮಾಣ ಸಂಘದ ವತಿಯಿಂದ ಪ್ರತಿಭಟನೆ
ಉದ್ಯೋಗ ಖಾತ್ರಿ ಕಾರ್ಮಿಕರ ಲೇಬರ್ ಕಾರ್ಡ್ ಕ್ಯಾನ್ಸ್‍ಲ್ ಮಾಡಿದ್ದಕ್ಕೆ ಆಕ್ರೋಶ
ಅಂಬೇಡ್ಕರ್ ಗಾರ್ಡ್‍ನಿಂದ ಡಿಸಿ ಕಚೇರಿ ವರೆಗೆ ಪ್ರತಿಭಟಭಟನಾ ರ್ಯಾಲಿ
ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
ವಿ/ವೊ: ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, 2019ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉದ್ಯೋಗ ಖಾತ್ರಿ ಕಾರ್ಮಿಕರ ಲೇಬರ್ ಕಾರ್ಡಗಳನ್ನು ಕ್ಯಾನ್ಸ್‍ಲ್ ಮಾಡಿದೆ.

ಈ ಮೂಲಕ ಕಾರ್ಡ್‍ಮೇಲೆ ಅವರಿಗೆ ಸಿಗುತ್ತಿದ್ದ ಎಲ್ಲಾ ಸಾಮಾಜಿಕÀ ಭದ್ರತಾ ಯೋಜನೆಗಳನ್ನು ರದ್ದು ಮಾಡಿದೆ. ಹಾಗಾಗಿ ಒಂದು ಸರಕಾರ ಕಾರ್ಡ್ ನೀಡಿ ಇನ್ನೊಂದು ಸರಕರ ಕಾರ್ಡ್‍ಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದರೂ ಕೆಲಸವಾಗಿಲ್ಲ. ಹಾಗಾಗಿ ಸರಕಾರ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಕೂಡಲೇ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಲೇಬರ್ ಕಾರ್ಡ್‍ಗಳನ್ನು ನೀಡಬೇಕು. ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಜದೂರ್ ನವ ನಿರ್ಮಾಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಕೂಡ ಉಪಸ್ಥಿತರಿದ್ದರು.