Belagavi News In Kannada | News Belgaum

ಕುಂದಾನಗರಿಗೆ ಬಂದಿಳಿದ ಮಾಜಿ ಸಿಎಂ ಬಿಎಸ್ ಯಡಯೂರಪ್ಪ

ಬೆಳಗಾವಿ : 11-4-2022 ರಾಜ್ಯದಲ್ಲಿ ಬಿಜೆಪಿ ಸಂಘಟನೆಯ ದೃಷ್ಠಿಯಿಂದ ರಾಜ್ಯ ಬಿಜೆಪಿ ನಾಯಕರು ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇದರ ಪ್ರಯುಕ್ತ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ನಾಯಕರ ಪ್ರವಾಸಕ್ಕೆ ಇಂದು ಸೋಮವಾರ ಮಾಜಿ ಸಿಎಂ ಯಡಯೂರಪ್ಪ ಕುಂದಾನಗರಿ ಬೆಳಗಾವಿಗೆ ಬಂದಿಳಿದ್ದಿದ್ದಾರೆ.

ವಿ/ವೊ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ಬಿಜೆಪಿ ನಾಯಕರು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದಾರೆ. ಅದರ ಭಾಗವಾಗಿ ಬೆÀಳಗಾವಿ ಜಿಲ್ಲೆಯಲ್ಲಿ ನಡೆಯಲಿರುವ ಬಿಜೆಪಿ ಸಂಘಟನಾತ್ಮಕ ಪ್ರವಾಸ ಮಾಡಲು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಯೂರಪ್ಪ ಇಂದು ಬೆಳಗಾವಿಗೆ ಆಗಮಿಸಿದರು.

ಈ ವೇಳೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಯೂರಪ್ಪನವರು, ಮುಂಬರುವ ಚುನಾವಣೆ ದೃಷ್ಠಿಯಿಂದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿಗೆ ಆಗಮಿಸಿದ್ದೇವೆ. ಚುನಾವಣೆ ಸಿದ್ಧತೆಗಳನ್ನು ಕುರಿತಂತೆ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಚರ್ಚೆಯನ್ನು ನಡೆಸಿ ಸಲಹೆ ಸೂಚನೆಗಳನ್ನು ನೀಡುತ್ತೇವೆ.

ನು ಚುನಾವಣೆ ಸಂಬAಧ ಹಲವಾರು ವಿಷಯಗಳ ಕುರಿತು ಚರ್ಚೆಯನ್ನು ನಡೆಸಲಾಗುತ್ತದೆ. ಇನ್ನು ನಿರಂತರವಾಗಿ ಪ್ರವಾಸ ಹಾಗೂ ಸಭೆಗಳು ನಡೆಯುತ್ತವೆ ಎಂದರು.
ಈ ವೇಳೆ ಬೆಳಗಾವಿ ರಾಜಕಾರಣದಲ್ಲಿ ಉಂಟಾಗಿರುವ ಒಡಕು ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ನಾಯಕರನ್ನು ಕರೆದು ಮಾತನಾಡುವ ಪ್ರಯತ್ನ ಮಾಡುವ ಕೆಲಸ ಮಾದುತ್ತೇವೆ. ಇನ್ನು ಅದಕ್ಕೆ ಏನು ಕ್ರಮ

 

ಕೈಗೊಳ್ಳಬೇಕೆಂಬುದನ್ನು ಕುರಿತು ಚರ್ಚೆ ನಡೆಸುತ್ತೇವೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕುರಿತಂತೆ ಯಡಯೂರಪ್ಪನವರು ಸಿಎಂ ಆಗಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿದಸಿದ ಅವರು, ಹಾಗೇನೂ ಇಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಉತ್ತಮವಾಗಿ ಕಾರ್ಯ ಮಾಡುತ್ತಿದ್ದಾರೆ.

 

ರಾಜ್ಯದಲ್ಲಿ ಹಿಂದೂ ಮುಸ್ಲಿಂ ಮಧ್ಯೆ ನಡೆಯುತ್ತಿರುವ ಘಟನೆಗಳಿಗೆ ನಮ್ಮ ಬೆಂಬಲವಿಲ್ಲ. ಈ ಘಟನೆಗಳನ್ನು ಕುರಿತಂತೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ.