Belagavi News In Kannada | News Belgaum

ನೀರವ್ ಮೋದಿ ಆಪ್ತ ಸುಭಾಷ್ ಈಜಿಫ್ಟ್‌ನಲ್ಲಿ ಅರೆಸ್ಟ್

ನವದೆಹಲಿ: ಕೈರೋದಲ್ಲಿ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಕಂಪನಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಸುಭಾಷ್ ಶಂಕರ್ ಪರಬ್‍ನನ್ನು ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಸಿಬಿಐ ಬಂಧಿಸಿ ಇಂದು ಮುಂಜಾನೆ ಮುಂಬೈಗೆ ಕರೆತಂದಿದ್ದಾರೆ.

7,000 ಕೋಟಿ ರೂ.ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾದ ಸುಭಾಷ್ ಫೈಸ್ಟಾರ್ ಡೈಮಂಡ್‍ನಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದರು. ಪ್ರಮುಖ ರಾಜತಾಂತ್ರಿಕ ಮಾತುಕತೆ ನಂತರ ಈಜಿಪ್ಟ್‍ನಿಂತ ಈತನನ್ನು ಗಡಿಪಾರು ಮಾಡಲಾಗಿತ್ತು. 2018 ರಲ್ಲಿ ಹಗರಣವು ಹೊರಬಿದ್ದ ಕೂಡಲೇ, ನೀರವ್ ಹಾಗೂ ಕುಟುಂಬ ಸದಸ್ಯರು ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರೊಂದಿಗೆ ಸುಭಾಷ್ ಕೂಡ ಭಾರತದಿಂದ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು.

ಅಂದಿನಿಂದ ಸುಭಾಷ್ ಅವರನ್ನು ಸಿಬಿಐ ಬೆನ್ನಟ್ಟುತ್ತಿತ್ತು. ಆತ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಲ್ಲಿಗೆ ತೆರಳಿತ್ತು. ಮುಂಬೈನಲ್ಲಿ ವಿಚಾರಣೆ ನಡೆಸಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ./////