Belagavi News In Kannada | News Belgaum

ಸಂಪುಟ ವಿಸ್ತರಣೆಗೆ ಜಗನ್‌ ಸರ್ಕಾರ ಸಜ್ಜು: ರೋಜಾಗೆ ಸಚಿವ ಪಕ್ಕಾ..!

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿಯವರ ಸಂಪುಟ ಪುನರಾಚನೆಗೊಂಡಿದ್ದು ಒಟ್ಟು 25 ಸಚಿವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾತಿ, ಸಮುದಾಯಗಳ ಆಧಾರದಲ್ಲಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದ್ದು, 25 ಸ್ಥಾನಗಳಲ್ಲಿ ಸಿಂಹಪಾಲು (10 ಸ್ಥಾನ) ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ.

ಮುಖ್ಯಮಂತ್ರಿ ಜಗನ್‌ ಸೇರಿದಂತೆ 2 ಸ್ಥಾನಗಳು ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದರೆ, 5 ಸ್ಥಾನಗಳು ಪರಿಶಿಷ್ಟ ಜಾತಿ, ಒಂದು ಸ್ಥಾನ ಪರಿಶಿಷ್ಟ ಪಂಗಡ, ರೆಡ್ಡಿ, ಕಾಪು ಜನಾಂಗಗಳಿಗೆ ತಲಾ ನಾಲ್ಕು ಸ್ಥಾನ ನೀಡಲಾಗಿದೆ.

ರೋಜಾಗೆ ಸಚಿವ ಪಟ್ಟ: ನಾಲ್ವರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದ್ದು ಅವರಲ್ಲಿ ಒಬ್ಬರು ಹಿಂದಿನ ಸಂಪುಟದಲ್ಲಿದ್ದವರೇ ಆಗಿದ್ದಾರೆ. ಇವರಲ್ಲಿ ಮಾಜಿ ಚಿತ್ರ ನಟಿ ರೋಜಾ ಅವರೂ ಒಬ್ಬರು.//////