ಈಶ್ವರಪ್ಪ ರಾಕ್ಷಸ ಪ್ರವೃತ್ತಿಯವನು: ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ಈಶ್ವರಪ್ಪ ರಾಕ್ಷಸಿ ಪ್ರವೃತ್ತಯವನು. ರಾಜೀನಾಮೆ ಕೊಡುವದಿಲ್ಲ ಎಂದು ಭಂಡತನ ಪ್ರದರ್ಶನ ಮಾಡಿದರೆ ನಾವು ಏನು ಹೇಳುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.
ಮೃತ ಗುತ್ತಿಗೆದಾರ ಸಂತೋಷ ಪಾಟೀಲ ಕುಟುಂಬಸ್ಥರಿಗೆ ಸಾಂತ್ವನ ನೀಡಲು ಕಾಂಗ್ರೆಸ್ ಬಹುತೇಕ ಪ್ರಮುಖ ಮುಖಂಡರು ಬೆಂಗಳೂರನಿಂದ ವಿಶೇಷ ವಿಮಾನದ ಮೂಲಕ ಇಂದು ಸಂಜೆ ಬೆಳಗಾವಿಗೆ ಬಂದಿಳಿದಿ ಸಂದರ್ರಭದಲ್ಲಿ ಮಾತನಾಡಿದ ಅವರು, ಸಚಿವರ ಅಥವಾ ಸರ್ಕಾರ ಒಪ್ಪಿಗೆಯಿಲ್ಲದೆ ಯಾವುದೇ ಗುತ್ತಿಗೆದಾರ ಕೆಲಸ ಮಾಡಲು ಸಾಧ್ಯವಿಲ್ಲ. ಇದು ಕಾಮನ್ ಸೆನ್ಸ್ ವಿಷಯ. ಸಂತೋಷ ಪಾಟೀಲ ಸಾಲಸೋಲ ಮಾಡಿಕಾಮಗಾರಿ ಮುಗಿಸಿದ್ದಾರೆ. ಇದು ಈಶ್ವರಪ್ಪ ಕಥೆ ಅಷ್ಟೆ ಅಲ್ಲ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಇದೇ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂತೋಷ ಪಾಟೀಲ ವರ್ಕ್ ಅರ್ಡರ್ ಪಡೆದಿರಲಿಲ್ಲ ಎನ್ನುವ ಬಿಜೆಪಿ ವಾದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಸಂತೋಷ ಪಾಟೀಲ ನವೆಂಬರ್ ತಿಂಗಳಲ್ಲಿ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ಮಾಧ್ಯಮಗಳಿಗೆ ತಿಳಿಸಿದ್ದರು. ಆಗೇಕೆ ಕ್ರಮ ಕೈಗೊಳ್ಳಲಿಲ್ಲ. ಸಬಂಧಪಟ್ಟ ಎಲ್ಲ ಸಚಿವರಿಗೆ ಮತ್ತು ಬಿಜೆಪಿ ಮುಖಂಡರಿಗೆ ಪತ್ರ ಬರೆದಿದ್ದರು. ಅದಕ್ಕೆ ಯಾರು ಪ್ರತಿಕ್ರಿಯಿಸಲಿಲ್ಲ. ಈಗ ವರ್ಕ್ ಆರ್ಡರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಇದ್ದರು./////