Belagavi News In Kannada | News Belgaum

ಭಾರೀ ಮಳೆಗೆ ಕೊಚ್ಚಿ ಹೋದ ಹಿಂದೂ ದೇವಾಲಯ

ಜೋಹಾನ್ಸ್‌ಬರ್ಗ್: ಸತತ ಮಳೆಯಿಂದಾಗಿ ದಕ್ಷಿಣ ಆಫ್ರಿಕಾದ ಡರ್ಬನ್‍ನಲ್ಲಿ 70 ವರ್ಷದಷ್ಟು ಹಳೆಯದಾದ ಅಮ್ಮನವರ ದೇವಾಲಯವು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ.
ಸತತವಾಗಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಆಫ್ರಿಕಾದ ದರ್ಬನ್‍ನಲ್ಲಿ ಭಾರೀ ಅನಾಹುತ ಉಂಟಾಗಿದ್ದು, ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿನ ಹೆದ್ದಾರಿಗಳು ಮತ್ತು ನಗರ ಬೀದಿಗಳು ಸಂಪೂರ್ಣ ಅಸ್ತವ್ಯಸ್ತವಾಗಿದ್ದು, 4 ದಿನಗಳ ನಿರಂತರ ಮಳೆಯಿಂದಾಗಿ ಕಾರುಗಳು ತೇಲುತ್ತಿರುವ ದೃಶ್ಯಗಳು ಕಂಡು ಬಂದವು.
ಚಂಡಮಾರುತದ ಅಬ್ಬರ ಇನ್ನೂ ತಗ್ಗಿಲ್ಲ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಡರ್ಬನ್ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಅಮ್ಲಾಟುಜಾನಾ ನದಿಯ ದಡದಲ್ಲಿದ್ದ ದೇವಾಲಯವು ಭಾರೀ ಮಳೆಗೆ ಸಂಪೂರ್ಣ ಕುಸಿದಿದ್ದು, ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ನಾಲ್ಕು ವರ್ಷಗಳ ಹಿಂದೆ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ದೇವಾಲಯವು ಸ್ವಲ್ಪ ಹಾನಿ ಆಗಿತ್ತು. ಆದರೆ ಅದನ್ನು ರಿಪೇರಿ ಮಾಡಲಾಗಿತ್ತು.
ಈ ಬಗ್ಗೆ ದೇವಸ್ಥಾನ ಸಮಿತಿಯ ಸಹಾಯಕ ಕಾರ್ಯದರ್ಶಿ ಕುರೇಶಾ ಮೂಡ್ಲೆ ಮಾತನಾಡಿ, ವಿಷ್ಣು ದೇವಸ್ಥಾನದಲ್ಲಿ ವಿಗ್ರಹಗಳು ಈಗಲೂ ಇವೆ. ಅವು ಗ್ರಾನೈಟ್ ಮಾಡಲಾಗಿದೆ. ಇದರಿಂದಾಗಿ ದೇಗುಲದ ಅಡಿಪಾಯದೊಂದಿಗೆ ವಿಗ್ರಹಳನ್ನು ಸ್ಥಾಪಿಸಿರುವುದರಿಂದ ಉಳಿದುಕೊಂಡಿವೆ. ಇಲ್ಲಿಗೆ ನಿತ್ಯವು ಭಕ್ತರು ಭೇಟಿ ನೀಡುತ್ತಾರೆ. ಆದರೆ ದೇವಿಯ ದೇವಸ್ಥಾನವೂ ಸಂಪೂರ್ಣ ನಾಶವಾಗಿದೆ ಎಂದು ತಿಳಿಸಿದರು./////