ಸಂವಿಧಾನ ರಚಿಸಿ ಸಮಾನತೆ ಸಾರಿ ಎಲ್ಲರೂ ಸರಿ ಸಮಾನರು ಮಾನವ ಕುಲವನ್ನು ಉದ್ದಾರ ಮಾಡಿದ ಮಹಾನ ಮೇಧಾವಿ ಡಾ ಬಿ ಆರ್ ಅಂಬೇಡ್ಕರ ಎಂದು ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ

ಹಳ್ಳೂರ 14:ಡಾ ಬಿ ಆರ್ ಅಂಬೇಡ್ಕರ ಅವರು ಸಂವಿಧಾನ ರಚಿಸಿ ಸಮಾನತೆ ಸಾರಿ ಎಲ್ಲರೂ ಸರಿ ಸಮಾನರು ಮಾನವ ಕುಲವನ್ನು ಉದ್ದಾರ ಮಾಡಿದ ಮಹಾನ ಮೇಧಾವಿ ಡಾ ಬಿ ಆರ್ ಅಂಬೇಡ್ಕರ ಎಂದು ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ ಹೇಳಿದರು.
ಅವರು ಗ್ರಾಮದ ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡ ಡಾ ಬಿ ಆರ್ ಅಂಬೇಡ್ಕರ ಅವರ 131ನೇ ಜಯಂತ್ಯೋತ್ಸವದಲ್ಲಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ ಹೇಳಿದರು. ಈಗಿನ ಯುವಕರು ತಮ್ನ ಜೀವನದಲ್ಲಿ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್ ವಾಯ್ ತಾಳಿಕೋಟಿ ಮಾತನಾಡಿ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಮಾನವ ಕುಲ ಉದ್ದಾರ ಮಾಡಿದ್ದಾರೆ, ಈಗಿನ ಯುವಕರು ಕೆಟ್ಟ ವ್ಯಸನಕ್ಕೆ ಬಲಿಯಾಗದೆ ಒಳ್ಳೆ ಶಿಕ್ಷಣ ಕಲಿತು ಮೇಧಾವಿಗಳಾಗಬೇಕು.ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದರು. ತಾಲೂಕಾ ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಗೋವಿಂದ ಮಾದರ ಮಾತನಾಡಿ ನಮ್ಮ ಹಿಂದುಳಿದ ಸಮಾಜ ಉದ್ದಾರವಾಗಬೇಕಾದರೆ ಅಂಬೇಡ್ಕರ ಅವರ ಚಿಂತನೆಗಳಾದ ಶಿಕ್ಷಣ, ಸಂಘಟನೆ ಹೋರಾಟ ಬಗ್ಗೆ ಪೂರ್ಣ ತಿಳಿದುಕೊಂಡು. ಸ್ವತಃ ಕೆಲಸ ಕಾರ್ಯ ಮಾಡಿ ಸಮಾಜದಲ್ಲಿ ಮುದುವರೆಯಬೇಕೆಂದು ಹೇಳುದರು.