ವಿದ್ಯುತ್ ಶಾಕ್ದಿಂದ 21 ವರ್ಷದ ಯುವಕ ಸಾವು

ಬೆಂಗಳೂರು: ಅಕಾಲಿಕ ಮೇಳೆಗೆ ವಿದ್ಯುತ್ ಕಂಬದ ವೈರ್ ಹರಿದು ಬಿದಿದ್ದು, ಈ ವ್ಯಾಪ್ತಿಯಲ್ಲಿ ವಿದ್ಯುತ್ ಹರಡಿ ಯುವಕನನ್ನು ಬಲಿ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡದಿದೆ.
ಬೆಸ್ಕಾಂ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ತಾಯಿ-ಮಗ ಶವ ಕಂಡು ಸಾರ್ವಜನಿಕರು ಬೆಚ್ಚಿ ಬಿದಿದ್ದಾರೆ.
ಮಂಗಮ್ಮನ್ನಪಾಳ್ಯ ನಿವಾಸಿ ವಸಂತ್ ( 21 ವರ್ಷ ) ಮೃತ ದುರ್ದೈವಿ. ವಸಂತ್ ದೀಪಾಂಜಲಿ ನಗರದ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ನಿನ್ನೆ ಸಂಜೆ ಗಾಳಿ ಮತ್ತು ಮಳೆ ಸುರಿದ ಪರಿಣಾಮ ಮರದ ಕೊಂಬೆ ತಾಗಿ ವೈರ್ ಕಟ್ ಆಗಿತ್ತು.ಕಟ್ ಆದ ವೈರ್ ಕೆಳಗೆ ಬಿದ್ದಿದ್ದು, ಕಂಬದ ಪಕ್ಕದಲ್ಲೇ ನಿಂತಿದ್ದ ವಸಂತನಿಗೆ ತಾಗಿತ್ತು.
ಕರೆಂಟ್ ಶಾಕ್ ಹೊಡೆದು ಕೆಳಬಿದ್ದಿದ್ದ ವಸಂತನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ವಸಂತ್ ಸಾವನ್ನಪ್ಪಿದ್ದಾನೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ನಿರ್ಲಕ್ಯದಡಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಬಗ್ಗೆ ವಸಂತ್ ತಾಯಿ ಜಯಲಕ್ಷ್ಮಮ್ಮ ಮಾತನಾಡಿದ್ದು, ನನ್ನ ಮಗನನ್ನ ಬಲಿ ತೆಗೆದುಕೊಂಡುಬಿಟ್ರು ಎಂದು ತಾಯಿ ಅಳಲು ತೊಡಿಕೊಂಡಿದ್ದಾರೆ.//////