ಸಿಡಿಲು ಬಡಿದು ವ್ಯಕ್ತಿ ಹಾಗೂ ಎಮ್ಮೆ ಸಾವು

ಬೆಳಗಾವಿ: ಬೆಳಗಾವಿ ತಾಲುಕಿನ ತುಮ್ಮರಗುದ್ದಿ ಗ್ರಾಮದ ಭೀಮಪ್ಪ ಅಡಿವೆಪ್ಪ ಬಸರಿಮರದ (25) ಎಮ್ಮೆ ಮೇಯಿಸಲು ಹೋದಾಗ ಸಿಡಿಲು ಬಡಿದು ಮೃತನಾಗಿದ್ದಾನೆ.
ಎಮ್ಮೆ ಮೇಯಿಸಿ ಬರುವುದಾಗಿ ಮನೆಯಲ್ಲಿ ಹೇಳಿ ಹೋರಟ ವ್ಯಕ್ತಿ ಜೋರಾಗಿ ಮಳೆ ಬರುವುದನ್ನು ಗಮನಿಸಿ ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ.
ಸಿಡಿಲಿನ ರಭಸಕ್ಕೆ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.