Belagavi News In Kannada | News Belgaum

ಪೊಲೀಸರಿಂದ ಕಳ್ಳರ ಬಂಧನ

ಹುಕ್ಕೇರಿ:ಪೊಲೀಸರಿಂದ ಕಳ್ಳರ ಬಂಧನ.: ಸ್ವತ್ತು ವಶ ಕಳ್ಳತನವಾಗಿ ತಿಂಗಳಲ್ಲೇ ಆರೊಪಿಗಳನ್ನ ಪತ್ತೆ ಹಚ್ಚಿದ ಹುಕ್ಕೇರಿ ಪೋಲಿಸರು.
ಕಳೆದ ವಾರವಷ್ಟೆ ಮೂರು ಜನ ಕಳ್ಳರನ್ನು ಬಂಧಿಸಿ, ಅವರಿಂದ ನಾಲ್ಕು ಪ್ರಕರಣಗಳನ್ನು ಪತ್ತೆ
ಹಚ್ಚಿ ಆರೋಪಿತರಿಂದ 4.95,000/-ರೂ ಕಿಮ್ಮತ್ತಿನ ಒಂದು ಬೊಲೆರೋ ವಾಹನ ಒಂದು ಮೊಟರ್
ಸೈಕಲ್‌ ಹಾಗೂ ಕಳುವಾಗಿ ಹೋದ ಎರಡು ಎಮ್ಮೆಗಳನ್ನು ವಶಪಡಿಸಿಕೊಂಡ ಹುಕ್ಕೇರಿ ಪೊಲೀಸರು
ಮುಂದುವರೆದು ಈ ದಿವಸ ಮತ್ತೋರ್ವ ಕಳ್ಳನನ್ನು ಬಂಧಿಸಿರುತ್ತಾರೆ.
ಬಂಧಿತ ಆರೋಪಿತನಾದ ರಾಘವೇಂದ್ರ @ ನಾಗು ಶಿವಶಂಕರ ದೊಡ್ಡಮನಿ, ವಯಸ್ಸು:23
ವರ್ಷ ಸಾl ಹುಕ್ಕೇರಿ ಸ್ವಾಮಿವೇಕಾನಂದ ನಗರ ಈತನಿಂದ ಜಾನುವಾರು ಕಳ್ಳತನ :ಮಾಡಲು
ಉಪಯೋಗಿಸಿದ ಕಳ್ಳತನ ಮಾಡಿದ ಒಂದು ಬೊಲೆರೋ ಪಶಪಡಿಸಿಕೊಂಡಿರುತ್ತದೆ. ಕಳೆದ ತಿಂಗಳು
ಹುಕ್ಕೇರಿ ಶಹರದಲ್ಲಿ ಹಾಡಹಗಲೇ ಮನೆ ಕಳ್ಳತನ ಮಾಡಿದ ಪ್ರಕರಣವನ್ನು ಪತ್ತೆ ಮಾಡಿ 51 ಗ್ರಾಂ
“ಬಂಗಾರದ ಆಭರಣ ಹಾಗೂ 20,000/-ರೂ ನಗದು ಹಣವನ್ನು ಜಪ್ತ ಮಾಡಿಕೊಂಡಿರುತ್ತಾರೆ.ಹೀಗೆ
ಒಟ್ಟು 5,75,000/-ರೂ ಮೌಲ್ಯದ ವಾಹನ, ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು
ವಶಪಡಿಸಿಕೊಂಡಿರುತ್ತಾರೆ.


ಈ ಪ್ರಕರಣಗಳನ್ನು ಪತ್ತೆ ಹಚ್ಚಲು ಮಾನ್ಯ ಹೆಚ್ಚುವರಿ ಎಸ್.ಪಿ ಶ್ರೀ ಮಹಾನಿಂಗ ನಂದಗಾವಿ,
ಗೋಕಾಕ ಡಿ.ವೈಎಸ್.& ಶ್ರೀ ಮನೋಜಕುಮಾರ್ ನಾಯ್ಕ ರವರ ಮಾರ್ಗದರ್ಶನದಲ್ಲಿ, ಕಳ್ಳರನ್ನ
ಬಂಧಿಸುವಲ್ಲಿ ಯಶಶ್ವಿಯಾದದೆ ಶ್ರೀ ಎಮ್. ಎಮ್ ತಹಶಿಲ್ದಾರ.ಪಿ ಐ ಹುಕ್ಕೇರಿ ಶ್ರೀ ಎಸ್ ಪಿ ಉನ್ನದ ಪಿಎಸ್ಐ ಹುಕ್ಕೇರಿ ಮತ್ತು ಶ್ರೀಮತಿ ಎಲ್ ಎಲ್. ಪತ್ತನ್ನವರ
ಜ್ಯೋತಿ.ವಾಲಿಕರ ಪೊ.ಎಸ್.ಐ. ಶ್ರೀ ಎ.ಎಸ್.ಸನದಿ ಎ.ಎಸ್.ಐ ಹಾಗೂ ಸಿಬ್ಬಂದಿ ಜನರಾದ
ಬಿ.ವಿ ನೇರ್ಲಿ, ಶೀ ಸಿ. ಡಿ ಪಾಟೀಲ, ಶ್ರೀ ಆರ್. ಎಸ್. ಡಂಗ, ಶ್ರೀ ಎಮ್.ಐ ಹೊಂಟಳಿ,
ಎಮ್.ಎಸ್.ಕಬ್ಬೂರ, ಶ್ರೀ ಉಮೇಶ ಅರಬಾಂವಿ., ಶ್ರೀ ಎ. ಎಲ್ ನಾಯಕ. ಶ್ರೀ ಫಿ.ಆರ್ ಭಡಾಕರ್
ಶ್ರೀ ಎಮ್ ಕೆ ಆತ್ತಾರ್, ಶ್ರೀ ಎ. ಎಸ್. ಶಿರಗನ್ನವರ, ಶ್ರೀ ಐ.ವಾಯ್ ಕಟಕೋಳ, ಶೀ ರಾವಸಹೇಬ
ಬೊಮ್ಮನಾಳ ಹಾಗೂ ಸಿಬ್ಬಂದಿ ಜನರ ಕಾರ್ಯವನ್ನು ಮಾನ್ಯ ಹುಕ್ಕೇರಿ ಸಿಪಿಐ ಶ್ಲಾಘಿಸಿದ್ದಾರೆ, ಇದೇ ರೀತಿ ಕರ್ತವ್ಯವನ್ನು
ಮುಂದುವರೆಸಲು ಪೋತ್ಸಾಹಿಸಿದ್ದಾರೆ