ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ

ಪಾವಗಡ: ಕೆಎಸ್ಆರ್ಟಿಸಿ ಡಿಪೋ ಆವರಣದಲ್ಲಿ ಡ್ರೈವರ್ ಕಂ ನಿರ್ವಾಹಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಘಟಕದಲ್ಲಿ ನಡೆದಿದೆ.
ಹೊಸದುರ್ಗ ಮೂಲದ ಡ್ರೈವರ್ ಕಂ ನಿರ್ವಾಹಕ ಶಶಿಧರ್(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಶಿಧರ್ ಪಾವಗಡ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟಕದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಗುರುವಾರ ಡಿಪೋ ಆವರಣದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾವಗಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.