Belagavi News In Kannada | News Belgaum

ಆಧುನಿಕ ಭಾರತದ ಶೈಕ್ಷಣಿಕ ಕ್ರಾಂತಿಜ್ಯೋತಿ ಮಹಾತ್ಮಾ‌ಫುಲೆ ಯವರು : ಶಾಸಕ‌ ಕುಮಠಳ್ಳಿ.

ಆಧುನಿಕ ಭಾರತದ ಶೈಕ್ಷಣಿಕ ಕ್ರಾಂತಿಜ್ಯೋತಿ ಮಹಾತ್ಮಾ‌ಫುಲೆ ಯವರು : ಶಾಸಕ‌ ಕುಮಠಳ್ಳಿ.
ಮಹಾತ್ಮ ಜ್ಯೋತಿಬಾ ಪುಲೆ ಅವರು 12  ನೇ ಶತಮಾನದಲ್ಲಿ ವರ್ಣ ಭೇದ ಹಾಗೂ ಲಿಂಗ ಭೇದದ ವಿರುದ್ಧ ಕ್ರಾಂತಿ ಮಾಡಿ  ಇತಿಹಾಸದ ಪುಟ ಸೇರಿದವರು ಹಿಂದುಳಿದ ಸಮುದಾಯದ ಜನಕ್ಕೆ ಶಿಕ್ಷಣ ನೀಡಿ ಆಧುನಿಕ‌ ಭಾರತದ ಶೈಕ್ಷಣಿಕ‌ ಕ್ರಾಂತಿಜ್ಯೋತಿಯಾಗಿ ಹೊರಹೊಮ್ಮಿದ್ದಾರೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಇಂದು ಸ್ಥಳೀಯ ಮಹಾತ್ಮಾ ಫುಲೆ ವೃತ್ತದಲ್ಲಿ ಜರುಗಿದ ಮಹಾತ್ಮ ಜೋತಿಬಾ ಪುಲೆ ಅವರ 195ನೇ ಜಯಂತ್ಯೋತ್ಸವ ಹಾಗೂ ಅಥಣಿ ತಾಲೂಕಾ‌ ಮಾಳಿ‌/ಮಾಲಗಾರ ಸಮಾಜದ ವತಿಯಿಂದ ಶಾಸಕ ಕುಮಠಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜ್ಯೋತಿಬಾ ಪುಲೆ ಅವರ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. ಪುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದಿರ್ಘ ಕಾಲದ ವರೆಗೆ ಹೊರಾಡಿದ್ದಾರೆ, ಅವರ ಮಡದಿ ಸಾವಿತ್ರಿ ಬಾಯಿಪುಲೇ ಅವರು ಕೂಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಹೋರಾಟಗಳನ್ನ ಮಾಡಿದ್ದಾರೆ. ಇತಿಹಾಸದಲ್ಲಿ ನೋಡಿದರೆ ದಂಪತಿಗಳಲ್ಲಿ ಯಾರಾದ್ರು ಒಬ್ಬರು ಮಾತ್ರ ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ ಆದರೆ ಇಲ್ಲಿ ಜೋತಿಬಾ ಪುಲೆ ಹಾಗೂ ಸಾವಿತ್ರಿಬಾಯಿ ಪುಲೆ ಅವರು ಇಬ್ಬರು ಕೂಡ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡು ಉನ್ನತ ಹೆಸರು ಪಡೆಯುವುದರ ಜೊತೆಗೆ ಮಹಾತ್ಮರು ಎಂದೆನಿಸಿಕೊಂಡಿದ್ದಾರೆ ಎಂದು ಹೇಳಿದರು.
ಮುಂದುವರೆದು ಈ ಸಲ‌ ಬಜೆಟ್ಟಿನಲ್ಲಿ ಮುಖ್ಯಮಂತ್ರಿ‌ ಬೊಮ್ಮಾಯಿ ಅವರು ಮಾಳಿ ಸಮಾಜಕ್ಕೆ ಹಲವು ಕೊಡುಗೆ ಕೊಟ್ಟಿದ್ದು ಸ್ವಾಗತಾರ್ಹ ತಾಲೂಕಿನ‌ ಮಾಳಿ ಸಮಾಜದ ಬೇಡಿಕೆಗಳನ್ನು ಶೀಘ್ರ ಈಡೇರಿಸುವುದಲ್ಲಿ ನಾನು ಪ್ರಾಮಾಣಿಕ‌ ಪ್ರಯತ್ನ‌ ಮಾಡುತ್ತೆನೆ ಎಂದರು.
ಸಮಾಜದ ಮುಖಂಡ ಹಾಗೂ ಉದ್ಯಮಿಗಳಾದ ಗಿರೀಶ್ ಬುಟಾಳಿ ಪಕ್ಷಾತೀತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿರುವ ಶಾಸಕ ಕುಮಠಳ್ಳಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಇದೇ ವೇಳೆ ಮಾಲಗಾರ ಸಮಾಜದ ವತಿಯಿಂದ ಬಸವೇಶ್ವರ ವೃತ್ತದಿಂದ ಇರುವ ರಸ್ತೆಗೆ ಮಹಾತ್ಮಾ ಜ್ಯೋತಿಬಾ ಫುಲೆ ರಸ್ತೆ ಎಂಬ ನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಅನಂತರ ಹಿರಿಯ ಮುಖಂಡ ಸದಾಶಿವ ಬುಟಾಳಿ,ಗಿರೀಶ ಬುಟಾಳಿ ಮತ್ತು ಸಂತೋಷ ಬಡಕಂಬಿ ಮಾತನಾಡಿದರು. ಈ ವೇಳೆ  ಪರಶುರಾಮ‌ ಸೋನಕರ, ಪ್ರಶಾಂತ ತೋಡಕರ, ರವಿ ಬಡಕಂಬಿ, ರಮೇಶ‌ ಮಾಳಿ, ಮಹಾಂತೇಶ ಮಾಳಿ, ಮಹಾದೇವ ಚಮಕೇರಿ, ಶಿವಪ್ಪ ಹಲವೇಗಾರ, ಶ್ರೀಶೈಲ ಹಳ್ಳದಮಳ, ನರಸು ಬಡಕಂಬಿ, ಆಕಾಶ ಬುಟಾಳಿ, ರವಿ ಬಕಾರಿ, ಸಂಜಯ ಬಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.