Belagavi News In Kannada | News Belgaum

ಅಥಣಿಯಲ್ಲಿ ತಾಲ್ಲೂಕು ಸರಕಾರಿ ನೌಕರರ ಬೃಹತ್ ಸಮ್ಮೇಳನ

ಅಥಣಿ:  ಹಣಕಾಸಿನ ಚೌಕಟ್ಟಿನಲ್ಲಿ ಈಗಿರುವ ಪರಿಸ್ಥಿತಿ ಅನುಗಣವಾಗಿ ಸರಕಾರಿ ನೌಕರಸ್ತರಿಗೆ ಸರ್ಕಾರದ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ  ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಥಣಿ ತಾಲೂಕಾ ಶಾಖೆ ಹಾಗೂ  ಮಲ್ಟಿಪರಪಜ್ ಕೋ ಆಪ್ ಸೊಸಾಯಿಟಿ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ನೌಕರರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ , ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಥಣಿ ಸರ್ಕಾರಿ ನೌಕರರ ಸಂಘದ ತಾಲೂಕಾ ಸಮ್ಮೇಳವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯವಾಗಿದ್ದು ಇದರ ಉದ್ದೇಶ ಸರ್ಕಾರಿ ನೌಕರಸ್ತರ ಆಗು ಹೋಗುಗಳನ್ನು ಸರಿ ಪಡಿಸಿ, 7 ನೇ ವೇತನ ಅಯೋಗದ ಜಾರಿ ಮಾಡುವುದಾಗಿದ್ದು ಅದಲ್ಲದೆ ಎಲ್ಲ ನೌಕರಸ್ತರು ಒಂದೇಡೆ ಸೇರಿ ಹರ್ಷ ಹಂಚಿಕೋಳ್ಳುವುದಾಗಿದೆ. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗ ಸರ್ಕಾರದ ಮೂರು ಅಂಗಗಳಾಗಿದ್ದು, ಕಾರ್ಯಾಂಗ ಮತ್ತು  ಶಾಸಕಾಂಗ ಇವೇರಡು ಕೂಡಿ ಕಾರ್ಯ ಮಾಡಿದಾಗ ಮಾತ್ರ ಒಳ್ಳೆಯ ಕಾರ್ಯಗಳನ್ನು ಸರ್ಕಾರದಿಂದ ನಿರೀಕ್ಷಿಸಬಹುದಾಗಿದೆ, ಆದರೇ ಇವೇರಡು ಸಹಕಾರದಿಂದ ಕಾರ್ಯವನ್ನು ಮಾಡುತ್ತಿಲ್ಲ,
ಶಾಸಕಾಂಗ ಮತ್ತು ಕಾರ್ಯಾಂಗ ಕೂಡಾ ದಾರಿ ತಪ್ಪಿವೆ ಎಂದು ವಿಷಾದ ವೇಕ್ತ ಪಡೆಸಿದವರು. ನಾನು ನೇರವಾಗಿ ಮಾತನಾಡುತ್ತೇನೆ ಗಾಳಿಯಲ್ಲಿ ಗುಂಡು ಹಾರಿಸುವ ರೂಢಿಯವನಲ್ಲ. ಎರಡು ಅಂಗಗಳು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ. ವರ್ಗಾವಣೆ ಹೋಟೆಲ್ ರೀತಿಯಲ್ಲಿ ದರಗಳು ಪಿಕ್ಸ್  ಆಗಿವೆ. ತಹಶಿಲ್ದಾರ, ಡಿವೈಎಸ್ಪಿ, ಪಿಎಸ್ಐ, ಫಾರೆಸ್ಟ ಹೀಗೆ ತಾಲ್ಲೂಕಿಗೆ
ಬರುವ ಅಧಿಕಾರಿಗಳಿಗೆ ಹಣ ಪಿಕ್ಸ್  ಮಾಡಲಾಗುತ್ತಿದೆ. ಇದರಿಂದಾಗಿ ಅಧಿಕಾರಿಗಳು ಭ್ರಷ್ಟರಾಗುತ್ತಿದ್ದಾರೆ ಆ ಮಟ್ಟಕ್ಕೆ  ಇಂದು ವ್ಯವಸ್ಥೆ ಬಂದು ತಲುಪಿದೆ. ಬಡವರು ಮತ್ತು ಸಾಮಾನ್ಯ ಜನರ ರಕ್ತ ಹೀರುತ್ತಿರುವ ಬಗ್ಗೆ  ಆತ್ಮಾವಲೋಕನದ ಅಗತ್ಯ ಇದೆ. ಹಣ ಕೊಟ್ಟವರು ಮತ್ತೆ ಹೊಂದಿಸಿಕೊಳ್ಳುವ ಪರಿಸ್ಥಿತಿ ಇದೆ. ನೌಕರಸ್ತರು ನಿರಂತರವಾಗಿ ಅವರು ಜನರೊಂದಿಗೆ ಸೌಜನ್ಯದಿಂದ ಕಾರ್ಯವನ್ನು ಮಾಡಲಿ ಎಂದು ನೌಕರಸ್ತರಿಗೆ ತಿಳಿ ಹೇಳಿದರು.
ಈ ವೇಳೆ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ರವರ ನ್ಯಾಯಾಂಗ ಶಾಸಕಾಂಗ ಹಾಗೂ ಕಾರ್ಯಾಂಗಗಳನ್ನು ಸಂವಿಧಾನ ಬದ್ದವಾಗಿ ನೀಡಿದರು. ಇದರಲ್ಲಿ ಕಾರ್ಯಾದ ಪಾತ್ರ ಮಹತ್ವದಾಗಿದೆ. ದೇಶ ಸುರಕ್ಷೀತವಾಗಿರಬೇಕಾದರೆ ಕಾರ್ಯಾಂಗ ಗಟ್ಟಿಯಾಗಿರಬೇಕು. ಸರ್ಕಾರಿ ನೌಕರಸ್ತರು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರಸ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರೀಯ ವೇತನವನ್ನು ಆದಷ್ಟು ಬೇಗನೆ ಸರ್ಕಾರಿ ನೌಕರಸ್ತರಿಗೆ ನೀಡಬೇಕು. ರಾಜ್ಯದಲ್ಲಿ 85 ಇಲಾಖೆಗಳು ಕಾರ್ಯವನ್ನು ನಿರ್ವಹಿಸುತ್ತಿದ್ದು ಅದರಲ್ಲಿ 5 ಲಕ್ಷ 20 ಸಾವಿರ ಸರ್ಕಾರಿ ನೌಕರಸ್ತರು ಕಾರ್ಯವನ್ನು ಮಾಡುತ್ತಿದ್ದಾರೆ. ನೌಕರಸ್ತರು ಸರ್ಕಾರಿ ಯೋಜನೆಗಳನ್ನು ಶ್ರೀ ಸಾಮಾನ್ಯನಿಗೆ ತಲುಪಿಸುವಂತೆ ಮಾಡಬೇಕು. ರಾಜ್ಯ ಸರ್ಕಾರಿ ನೌಕರರ ಸಂಘವು ಆಡಳಿತ ವೇವಸ್ಥೆಯನ್ನು ಬದಲಾವಣೆ ಮಾಡುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಮಣ್ಣ ದರಿಗೌಡ ಮಾತನಾಡಿ, ಅಥಣಿ ತಾಲೂಕಾ ಸರ್ಕಾರಿ ನೌಕರಸ್ತರ ಸಂಘದ ತಾಲೂಕಾ ಮಟ್ಟದ ಸಮ್ಮೇಳನ ಎಲ್ಲ ಸರ್ಕಾರಿ ಇಲಾಖೆಯ ನೌಕರಸ್ತರು ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನಿತರರ ಸಹಕಾರದಿಂದ ತಾಲೂಕಾ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನ ಅತ್ಯಂತ ಯಶಸ್ವಿ ಆಗಿದ್ದು, ನಮ್ಮ ಕಾರ್ಯಕ್ರಮಕ್ಕೆ
ಆಗಮಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದು ಅಲ್ಲದೆ ಮಾಜಿ ಉಪಮುಖ್ಯಮಂತ್ರಿ ಸವದಿಯವರು ಹಾಗೂ ಶಾಕರಾದ ಮಹೇಶ ಕುಮಠಳ್ಳಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದ್ದಕ್ಕೆ ಅವರಿಗೆ ನಾನು ಆಭಾರಿಯಾಗಿರುವೆ ಎಂದು ತಿಳಿಸಿದರು.
ಈ ವೇಳೆ ಶೇಗುಣಸಿಯ ವಿರಕ್ತಮಠದ ಡಾ. ಮಹಾಂತ ದೇವರು ಆಶೀರ್ವಚನ ನೀಡಿದರು.
ಈ ವೇಳೆ ಉಪಾಧ್ಯಕ್ಷರು ರುದ್ರಪ್ಪಾ ಎಸ್, ಬಸವರಾಜ, ಎಸ್. ತಿಮ್ಮೇಗೌಡಾ,  ತಹಶೀಲ್ದಾರ ದುಂಡಪ್ಪಾ ಕೋಮಾರ, ಡಿವೈಎಸ್ಪಿ ಎಸ್.ವಿ ಗಿರೀಶ, ತಾ.ಪಂ ಕಾರ್ಯನಿರ್ವಾಕ ಅಧಿಕಾರಿ ಶೇಖರ ಕರಬಸಪ್ಪಗೊಳ, ಪ್ರವೀಣ ಪಾಟೀಲ, ರಾಜೇಂದ್ರ ಬುರ್ಲಿ, ಮಹಾದೇವ ಬಿರಾದಾರ, ಸಿದ್ದಾರೊಡ್ಡ ಸವದಿ,  ಜೆ. ಎಮ್ ಹೀರೆಮಠ, ಉದಯ ಪಾಟೀಲ, ವೀರಣ್ಣ ವಾಲಿ, ದನುರಾಜ ಬಿ, ಎಸ್.ಎಸ್.ಮಾಕಾಣಿ, ಬಸವಗೌಡ ಕಾಗೆ, ಗೌಡಪ್ಪ ಖೋತ್, ಸಿಡಿಪಿಓ ಅಶೋಕ ಕಾಂಬಳೆ, ಕೆ.ಟಿ.ಕಾಂಬಳೆ, ಸುಭಾಷ್ ಹುಬ್ಬಳ್ಳಿ,  ಸೇರಿದಂತೆ ಹಲವರು ಉಪಸ್ಥಿತರಿದ್ದರು.