Belagavi News In Kannada | News Belgaum

ಅಥಣಿ:ಶಿವಯೋಗಿಗಳವರ ನಾಡಿನಲ್ಲಿ ಜನಸಿದ ನಾವೇ ಪುಣ್ಯವಂತರು ಝಂಜರವಾಡದ ಶ್ರೀ ಬಸವರಾಜೇಂದ್ರ ದೇವರು ಅಭಿಮತ

ಅಥಣಿ:ಶಿವಯೋಗಿಗಳವರ ನಾಡಿನಲ್ಲಿ ಜನಸಿದ ನಾವೇ ಪುಣ್ಯವಂತರು
ಝಂಜರವಾಡದ ಶ್ರೀ ಬಸವರಾಜೇಂದ್ರ ದೇವರು ಅಭಿಮತ
ವಿಜಯವಾಣಿ ಸುದ್ದಿಜಾಲ ನಂದೇಶ್ವರ
ಮುರುಘೇಂದ್ರ ಶಿವಯೋಗಿಗಳು ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಸಿ ಭಕ್ತರ ಉದ್ದಾರ ಮಾಡಿದ್ದಾರೆ. ಅವರ ಪಾದ ಸ್ಪರ್ಶ ಮಾಡಿದ ಗ್ರಾಮಗಳು ಪರಮಪಾವನವಾಗಿವೆ. ಶಿವಯೋಗಿಗಳವರ ನಾಮ ನೆನೆದರೆ ಸಾಕು ಎಲ್ಲ ಸಂಕಷ್ಟ ದೂರಾಗುತ್ತವೆ. ಅವರ ನಾಡಿನಲ್ಲಿ ಜನಸಿದ ನಾವೇ ಭಾಗ್ಯ ಹಾಗೂ ಪುಣ್ಯವಂತರು. ಕಾಯಕ ದಾಸೋಹ ಬಸವ ತತ್ವಗಳ ಪ್ರಸಾರದ ಮೂಲಕ ಶಿವಯೋಗಿಗಳು ನಮಗೆಲ್ಲಿಗೂ ಅಮೂಲ್ಯ ಕೊಡುಗೆ ನೀಡಿದ್ದಾರೆಂದು ಝಂಜರವಾಡದ ಶ್ರೀ ಬಸವರಾಜೇಂದ್ರ ದೇವರು ಹೇಳಿದರು.
ಸಮೀಪದ ಜನವಾಡ ಗ್ರಾಮದಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವದ ಅಂಗವಾಗಿ ಶನಿವಾರ ರಾತ್ರಿ ಜರುಗಿದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನ ಚರಿತ್ರೆ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ  ಅವರು ಮಾತನಾಡುತ್ತಾ  ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಸುಂದರವಾಗಿ ಜರುಗಲಿದೆ. ನಾಡಿನ ಹೆಸರಾಂತ ಕಲಾವಿದರೂ, ಗಣ್ಯ ಮಾನ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಕ್ಷಿಯಾಗಲಿದ್ದಾರೆಂದು ಅವರು ಹೇಳಿದರು.
ನದಿ-ಇಂಗಳಗಾAವದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರಿಗೆ ಅಪ್ಪನವರು ಎಂದು ಕರೆಯುತ್ತಿದ್ದರು. ತಮ್ಮ ಜೀವನದ ಉದ್ದಕ್ಕೂ ಭಕ್ತರ ಶ್ರೆಯೋಭಿವೃದ್ಧಿ ಹಾಗೂ ಉದ್ದಾರವೇ ಅವರ ನಿತ್ಯ ಕಾಯಕವಾಗಿತ್ತು.  ಈ ನಾಡಿನಲ್ಲಿ ಬಸವಾದಿ ಶಿವಶರಣರ ನಂತರ ಮುರುಘೇಂದ್ರ ಶಿವಯೋಗಿಗಳು ಎಲ್ಲಕಡೆಗೂ ಸಂಚರಿಸಿ ಈ ಭೂಮಿಯನ್ನು ಪರಮ ಪವಿತ್ರ ಮಾಡಿದ್ದಾರೆ. ಅವರು ಜೀವನ ಚರಿತ್ರೆ ಕೇಳುವುದರಿಂದ ಮನಸ್ಸಿಗೆ ಆನಂದ ಉಂಟಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜನವಾಡ ಅಲ್ಲಮ ಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗದಗದ ಶ್ರೀ ಕಲ್ಲಿನಾಥ ಶಾಸ್ತಿçÃಗಳು, ಮಹಾದೇವ ಧರಿಗೌಡ, ಲಕ್ಷö್ಮಣ ಗುರವ, ಬಸಪ್ಪ ಜಾಮಗೌಡ, ಕಲ್ಲಪ್ಪ ಯಲಶೆಟ್ಟಿ, ಶಿವಪ್ಪ ಬಡ್ಡೂರ, ಈರಪ್ಪ ಯಲಶೆಟ್ಟಿ, ಮಲ್ಲಪ್ಪ ಹಂಚಿನಾಳ, ಬಸಲಿಂಗ ನ್ಯಾಮಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.