Belagavi News In Kannada | News Belgaum

ಮಾವನ ಹತ್ಯೆಗೆ ಸುಪಾರಿ

ರಾಮನಗರ: ತಾಲೂಕಿನ ಬೈರವನದೊಡ್ಡಿ ಸಮೀಪದ ತೋಟದ ಮನೆಯಲ್ಲಿ ಫೆಬ್ರವರಿ 25ರ ಶುಕ್ರವಾರ ರಾತ್ರಿ ನಡೆದಿದ್ದ ಕಾಂಗ್ರೆಸ್ ಮುಖಂಡ ಗಂಟಪ್ಪ (55) ಹತ್ಯೆ ಪ್ರಕರಣವನ್ನು ಒಂದೂವರೆ ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ಮಾವ ಗಂಟಪ್ಪ ಹತ್ಯೆಗೆ ಸೊಸೆ ಚೈತ್ರಾ ಸುಪಾರಿ ನೀಡಿರುವುದಾಗಿ ತಿಳಿದು ಬಂದಿದೆ.

 

ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ ಎಂದು ಮಾವನ ಹತ್ಯೆಗೆ ಪ್ರಿಯತಮ ನವೀನ್​ಗೆ ಚೈತ್ರಾ ಸುಪಾರಿ ನೀಡಿದ್ದಾಳೆ. ಕನಕಪುರ ತಾಲೂಕಿನ ಸೊಂಟನಹಳ್ಳಿ ನಿವಾಸಿ ನವೀನ್ ಎಂಬಾತನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ.

 

ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣದಲ್ಲಿ ಆರೋಪಿ ಬಂಧನ, ಸೊಸೆ ಮತ್ತು ಆತನ ಪ್ರಿಯಕರನ ಬಂಧನ, ರಾಮನಗರ ಕಾಂಗ್ರೆಸ್ ಮುಖಂಡ ಕೊಲೆ ಪ್ರಕರಣ, ರಾಮನಗರ ಅಪರಾಧ ಸುದ್ದಿ,ಆರೋಪಿ ಚೈತ್ರಾ  ಗಂಡ-ಹೆಂಡ್ತಿ ವೈವಾಹಿಕ ಬಿರುಕು: 3 ತಿಂಗಳ ಕಂದಮ್ಮನ ಕೊಂದ ತಾಯಿ ಈ ಹಿಂದೆ ನವೀನ್ ಹಾಗೂ ಚೈತ್ರ ಪ್ರೀತಿಸುತ್ತಿದ್ದರು.

 

ಬಳಿಕ ಗಂಟಪ್ಪನ ಮಗ ನಂದೀಶ್​ನನ್ನು ಮದುವೆಯಾಗಿದ್ದಳು. ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಾನಂದೂರು ನಿವಾಸಿಯಾದ ಗಂಟಪ್ಪ ತಮ್ಮ ತೋಟದಲ್ಲಿ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದರು. ಫೆ.25ರ ರಾತ್ರಿ ಗಂಟಪ್ಪ ಬರ್ಬರವಾಗಿ ಕೊಲೆಯಾಗಿದ್ದರು.