ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ
news

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮಹಿಳೆಯರು ಎಷ್ಟು ಸೇಫ್ ಎನ್ನುವುದೇ ಪ್ರಶ್ನೆಯಾಗಿದ್ದು, ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 36 ವರ್ಷದ ಮಹಿಳೆಯ ಮೇಲೆ ಮೂರು ಜನ ಕಾಮುಕರು ಸೇರಿಕೊಂಡು ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನೂ ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಮಹಿಳೆಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೆಹಲಿಯ ಪೋಲಿಸರಿಗೆ ದೂರು ನೀಡಿದ್ದಳು. ನವೀನ್ ಸಿಂಗ್ ಭಂಡಾರಿ (28), ಬಿಶ್ವಾ ಮೋಹನ್ (26) ಮತ್ತು ಅಕ್ಷಯ್ ತನೇಜಾ ಎಂಬುವ ಯುವಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದೆ. ಘಟನೆ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ದೆಹಲಿ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ.
ದೆಹಲಿಯ ಪಂಜಾಬಿ ಬಾಗ್ ಪೋಲಿಸ್ ಠಾಣೆಯ ಪೋಲಿಸರು ಸೆಕ್ಷನ್ 376 ಆರ ಅಡಿ ಹಾಗೂ ಸೆಕ್ಷನ್ 328 ರ ಅಡಿ ಎಫ್ಐಆರ್ ದಾಖಲಿಸಿಕೊಂಡು ಶುಕ್ರವಾರ (15 ಏಪ್ರಿಲ್) ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ದೆಹಲಿಯ ಪಶ್ಚಿಮ ವಿಭಾಗದ ಉಪ ಪೋಲಿಸ್ ವರಿಷ್ಠಾಧಿಕಾರಿ ಜ್ಞಾನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.