Belagavi News In Kannada | News Belgaum

ತಂಬಾಕು ಅಂಗಡಿಗಳ ಮೇಲೆ ದಾಳಿ: 21 ಪ್ರಕರಣಗಳು ದಾಖಲು

 

ಬೆಳಗಾವಿ,ಏ.16: ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಕೋಟ್ಪಾ ಕಾಯ್ದೆಯಡಿ ತಂಬಾಕು ಅಂಗಡಿಗಳ ಮೇಲೆ ಶನಿವಾರ(ಏ.16) ದಾಳಿ ನಡೆಸಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳು 21 ಪ್ರಕಟಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

 

ಗ್ರಾಮದ ಶಾಲೆಗಳ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ನಿಯಮ ಮೀರಿ ತಂಬಾಕು ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ನಾಮಫಲಕಳನ್ನು ಪ್ರದರ್ಶಿಸಿ, ಗ್ರಾಮದ ಪ್ರಮುಖ ಕಡೆಗಳಲ್ಲಿ ಅಂಟಿಸಿ ಜಾಗೃತಿ ಮೂಡಿಸಿದರು.

 

ದಾಳಿಯಲ್ಲಿ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಬಿ.ಎನ್.ತುಕ್ಕಾರ, ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಸಮಾಜ ಕಾರ್ಯಕರ್ತೆ ಕವಿತಾ ರಾಜನ್ನವರ, ಆರೋಗ್ಯ ಇಲಾಖೆ ಸಿಬ್ಬಂದಿ ಉದಯ ಹಿರೇಮಠ ಹಾಗೂ ಪೊಲೀಸ ಸಿಬಂದ್ದಿಗಳಾದ ನಾರಾಯನ ಪಟವರ್ದನ್, ಸಂದೀಪ್ ಪಾಟೀಲ ಭಾಗವಹಿಸಿದ್ದರು.